ಮೊಳಕಾಲ್ಮೂರು:-ಮೂಲಸೌಕರ್ಯಗಳಿಲ್ಲದೆ ಕೆಸರು ಗದ್ದೆಯಾಗಿದೆ ಸ್ವಾಮಿ ಸಾಲ ಸುಲಾ ಮಾಡಿ ಬಂಡವಾಳ ಹಾಕಿ ತಂದಿರುವ ತರಕಾರಿ ಬೆಳೆಗಳನ್ನು ಏನು ಮಾಡಬೇಕು ನೀವೇ ಹೇಳಿ ಸ್ವಾಮಿ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ನಮ್ಮ ಕಷ್ಟಗಳನ್ನು ಯಾರಿಗೆ ತಿಳಿಸಬೇಕು.ಈ ಮೊದಲು ಸಂತೆ ಮೈದಾನದಲ್ಲಿ ಉತ್ತಮ ವ್ಯಾಪಾರ ಆಗುತ್ತಿತ್ತು ಈಗ ಇಲ್ಲಿಗೆ ಯಾರು ಬರುವುದಿಲ್ಲ ತುಂಬಾ ದೂರ ಆಗಿರುವುದರಿಂದ ಇಲ್ಲಿನ ವ್ಯಾಪಾರಿಗಳಿಗೆ ತುಂಬಾ ಸಮಸ್ಯೆ ಆಗಿದೆ ಎಂದು ಇಲ್ಲಿನ ವ್ಯಾಪಾರಿಯಾದ ಪರ್ವತಮ್ಮ ಆಕ್ರೋಶವನ್ನು ಹೊರಹಾಕಿದರು.
ತಾಲೂಕು ಪ್ರದೇಶವಾಗಿರುವ ಇಲ್ಲಿ ದಿನಾಲು ಸುರಿಯುತ್ತಿರುವ ಮಳೆಯಿಂದ ವ್ಯಾಪಾರ ಮಾಡಲು ಆಗದೆ ತರಕಾರಿಗಳನ್ನು ಇಲ್ಲಿ ಬಿಸಾಡಿ ಹೋಗಬೇಕು ಇಲ್ಲ ಅಂದರೆ ನಮ್ಮನೆ ಈ ಜಗದಲ್ಲಿ ಮಲಗಿಸಿ.ನಮ್ಮ ಹೊಟ್ಟೆಗೆ ಹೊಡೆಯಬೇಡಿ ಇಲ್ಲಿ ಮೂಲಸೌಕರ್ಯಗಳನ್ನು ಮಾಡಿಸಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು ಜಕಾತಿ ಮಾತ್ರ ಕರೆಕ್ಟಾಗಿ ನೀಡಬೇಕು ಎಂದು ಪಟ್ಟಣ ಪಂಚಾಯಿತಿಗೆ ಇಡೀ ಶಾಪ ಹಾಕಿದರು.
ಇಲ್ಲಿ ಸಂತೆ ಮಾಡಲು ಬಂದರೆ ಸೊಳ್ಳೆಗಳ ಕಾಟ ನೊಣಗಳ ಕಾಟ ಹೆಚ್ಚಾಗಿದೆ 50 ರಿಂದ 60,000 ಬಂಡವಾಳ ಹಾಕಿ ತಂದಿರುವ ತರಕಾರಿಗಳನ್ನು ಯಾರು ತೆಗೆದುಕೊಳ್ಳುತ್ತಾರೆ ಇಲ್ಲಿ ವ್ಯಾಪಾರ ಮಾಡಲು ಬಂದರೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ ಅದಕ್ಕೆ ಜವಾಬ್ದಾರರು ಯಾರು ನಿಮ್ಮನ್ನು ಕೈಮುಗುದು ಕೇಳಿಕೊಳ್ಳುತ್ತೇವೆ ನಮಗೆ ಮೂಲಸೌಕರ್ಯಗಳನ್ನು ನೀಡಿ ಸಂತೆಗೆ ಅನುಕೂಲ ಮಾಡಿಕೊಡಬೇಕು ಎಂದು ಇಲ್ಲಿನ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು.
ವರದಿ ಪಿಎಂ ಗಂಗಾಧರ