Ad imageAd image

ಪತ್ರಕರ್ತರ ಜೊತೆ ಊಟ ಸವಿಯುತ್ತ, ಉಭಯ ಕುಶಲೋಪರಿ ವಿಚಾರಿಸಿದ ಸಂತೋಷ್ ಲಾಡ್ 

Bharath Vaibhav
ಪತ್ರಕರ್ತರ ಜೊತೆ ಊಟ ಸವಿಯುತ್ತ, ಉಭಯ ಕುಶಲೋಪರಿ ವಿಚಾರಿಸಿದ ಸಂತೋಷ್ ಲಾಡ್ 
WhatsApp Group Join Now
Telegram Group Join Now

ಬೆಂಗಳೂರು : ವಿಧಾನಸೌಧದ ಎದುರಿಗಿರೋ ಗಾರ್ಡನ್ ‌ನಲ್ಲಿ ಇವತ್ತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಪತ್ರಕರ್ತರ ಜೊತೆ ವಿಧಾನಸೌಧದ ಗಾರ್ಡನ್ ನಲ್ಲಿ ಊಟ ಸವಿಯುತ್ತ, ಉಭಯ ಕುಶಲೋಪರಿ ವಿಚಾರಿಸುತ್ತ ಕೆಲ ಹೊತ್ತು ಕಳೆದರು.

ಸಚಿವ ಲಾಡ್‌ ಅವರು ಸದಾ ಸರಳತೆಗೆ ಆದ್ಯತೆ ನೀಡುವುದು ಗಮನಿಸಬೇಕಾದ ಅಂಶ. ಅವರು ಕ್ಷೇತ್ರದಲ್ಲಾಗಲಿ, ಬೇರೆಡೆಯಾಗಲಿ ಪ್ರವಾಸ ಹೋದ ವೇಳೆ, ಕಾರ್ಯಕ್ರಮಕ್ಕೆ, ಸಭೆಗಳಿಗೆ ತೆರಳುವ ವೇಳೆ ತಾನೊಬ್ಬ ಸಚಿವ ಎಂಬ ಹಮ್ಮು ಬಿಮ್ಮಿಲ್ಲದೆ ಜನರೊಂದಿಗೆ ಬೆರೆಯುತ್ತಾರೆ, ಅವರ ಕಷ್ಟಗಳನ್ನು ಆಲಿಸುತ್ತಾರೆ, ಧನಸಹಾಯ ಮಾಡುತ್ತಾರೆ.

ಸಚಿವ ಲಾಡ್‌ ಅವರು, ಊಟದ ವಿಷಯದಲ್ಲಂತೂ ಇನ್ನೂ ಸರಳತೆ ತೋರುತ್ತಾರೆ. ಜನಸಾಮಾನ್ಯರು ಎಲ್ಲೇ ಸಿಗಲಿ ಅವರ ಬುತ್ತಿಯನ್ನು ಹಂಚಿಕೊಳ್ಳುತ್ತಾರೆ, ಅವರೊಂದಿಗೆ ಉಪಾಹಾರ ಸೇವಿಸುತ್ತಾರೆ.

ರಸ್ತೆ ಬದಿಯಲ್ಲಿ ಯಾರೇ ಸಿಗಲಿ ಅವರನ್ನು ಮಾತನಾಡಿಸಿ ಕಷ್ಟಗಳನ್ನು ಅರಿಯುತ್ತಾರೆ. ಚಹಾ ಅಂಗಡಿಯಲ್ಲಿ ತಾವೇ ಮುಂದೆ ನಿಂತು ಚಹಾ ತಯಾರಿಸುತ್ತಾರೆ.

ಜೊತೆಯಲ್ಲಿದ್ದವರಿಗೆ ತಾವೇ ಊಟ ಬಡಿಸುತ್ತಾರೆ. ಬೇರೆಯವರಿಗೆ ಸಹಾಯ ಮಾಡುವುದರಲ್ಲೇ ಅವರು ಸಂತೋಷವನ್ನು ಕಾಣುತ್ತಾರೆ.ಸಾಮಾನ್ಯರಲ್ಲಿ ಸಾಮಾನ್ಯಾರಗಿರೋದ್ರಲ್ಲೇ ಸಂತೋಷ ಪಡುವ ಸಂತೋಷ್ ಲಾಡ್ ಎಲ್ಲರಿಗೂ ಇಷ್ಟವಾಗೋದು ಇಂತಹ ಕಾರಣಗಳಿಗಾಗಿಯೇ.

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!