Ad imageAd image

ಬಿಜೆಪಿಯವರಿಗೆ ಭವಿಷ್ಯ ಹೇಳುವದೇ ಕಾಯಕವಾಗಿದೆ:- ಸಂತೋಷ ಲಾಡ್

Bharath Vaibhav
ಬಿಜೆಪಿಯವರಿಗೆ ಭವಿಷ್ಯ ಹೇಳುವದೇ ಕಾಯಕವಾಗಿದೆ:- ಸಂತೋಷ ಲಾಡ್
WhatsApp Group Join Now
Telegram Group Join Now

ಹುಬ್ಬಳ್ಳಿ:-ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡುವದು ಅಪ್ರಸ್ತುತ. ಯಾರಾದ್ರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರೆ, ಅದು ಅವರ ವೈಯಕ್ತಿ ಹೇಳಿಕೆ. ನಮ್ಮ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ‌ಅವರು, ಸಿಎಂ ಬದವಣೆ ಕುರಿತಂತೆ ವೇಣುಗೋಪಾಲ ಹಾಗೂ ಸುರ್ಜೆವಾಲ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಹೈಕಮಾಂಡ್ ‌ನಿಂದ ಸಿದ್ದರಾಮಯ್ಯ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಆದ್ರೆ ವೈಯಕ್ತಿಕ ಅಭಿಪ್ರಾಯಗಳು ನನಗೆ ಗೊತ್ತಿಲ್ಲ. ಅವರನ್ನೇ ಕೇಳಬೇಕು ಎಂದರು.

ಬಿಜೆಪಿಯವರಿಗೆ ಭವಿಷ್ಯ ಹೇಳುವದೇ ಕಾಯಕವಾಗಿದೆ. ದೀಪಾವಳಿ ಒಳಗೆ ಸರ್ಕಾರ ಬಿಳುತ್ತೆ ಅಂತ ಹೇಳಿದ್ರೆ ಅವರಿಗೆ ಹೇಗೆ ಉತ್ತದ ಕೊಡಬೇಕು. ಒಂದು ವರ್ಷದಿಂದ ಇದನ್ನೇ ಹೇಳುತ್ತಿದ್ದಾರೆ. ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವದಿಲ್ಲ.

ಸರ್ಕಾರ ಐದು ಶುಭದ್ರವಾಗಲಿದೆ. 136 ಸೀಟು ಇದೆ. ಯಾವುದೇ ಕಾರಣಕ್ಕೂ ಆ ರೀತಿ ಆಗುವದಿಲ್ಲ. ಹಾಗೇನಾದ್ರು ಆದ್ರೆ ಕೇಂದ್ರದಲ್ಲಿ ಆಗಬಹುದು. ಯಾಕೆಂದರೆ ಅವರ ಹತ್ತಿರ ಪುಲ್ ಮಿಜಾರಿಟಿ ಇಲ್ಲ. ನಾಳೆ ಜಮ್ಮು ಕಾಶ್ಮೀರ, ಹರಿಯಾಣ, ಮಹಾರಾಷ್ಟ್ರ ಸೋಲುವ ಸಾಧ್ಯತೆ ಇದೆ. ಬಿಹಾರ ಕೂಡ ಸೋಲಬಹುದು. ಮುಂದೆ ನಾಲ್ಕು ರಾಜ್ಯಗಳ ಚುನಾವಣೆಯಾದ್ರೆ ಬಿಜೆಪಿ ಸರ್ಕಾರದ ಕೇಂದ್ರದಲ್ಲಿ ಇರುತ್ತಾ ಎಂಬ ಪ್ರಶ್ನೆಯನ್ನು ಅವರನ್ನು ನೀವು ಕೇಳಬೇಕು ಎಂದು ಪ್ರಶ್ನಿಸಿದರು. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಬಿಳುವದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಫೋಟೊಗಳು ವೈರಲ್ ವಿಚಾರದಲ್ಲಿ ಆರೋಪ ಮಾಡುತ್ತಿರುವ ಪ್ರಹ್ಲಾದ್ ಜೋಶಿಯವರದೇ ಕೈವಾಡ ಇರಬಹುದು. ಇಷ್ಟು ನಿಖರವಾಗಿ ಯಾರು‌ ಫೋಟೊ ಬಿಟ್ಟಿದ್ದಾರೆ ಎಂದು ಹೇಳುತ್ತಾರೆ ಅಂದ್ರೆ ಅವರಿಗೆ ಮಾಹಿತಿ ಇರಬೇಕು ಎಂದು ಕುಟುಕಿದರು.

ಮುಡಾ, ವಾಲ್ಮೀಕಿ ಹಗರಣ ಮರೆಮಾಚುವ ಪ್ರಶ್ನೆ ಇಲ್ಲ. ಈ ಪ್ರಕರಣ ಓಪನ್ ಇದೆ. ಮುಡಾ ಹಗರಣದ ಬಗ್ಗೆ ಜೋಶಿಯವರಿಗೆ ಪ್ರಶ್ನೆ ಮಾಡಿ ಆವಾಗ ಸತ್ಯ ಗೊತ್ತಾಗಲಿದೆ. ಇದರಲ್ಲಿ ಸಿದ್ದರಾಮಯ್ಯ ಅವರು ಮೇಲೆ ಯಾಕೆ ಪ್ರಾಸಿಕ್ಯೂಸನ್ ಹಾಕಿದ್ದಾರೆ. ಇನ್ನು 127 ಸೈಟ್ ಪಡೆದ ಮೇಲೆ ಯಾಕೆ ಇಲ್ಲ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ತಕ್ಷಣ ಮಹದಾಯಿ ಕ್ಲೇಯರೆನ್ಸ್ ಮಾಡ್ತೇವಿ ಎಂದು ಬಿಜೆಪಿಯವರು ಹೇಳಿದ್ದರು. ಇಲ್ಲಿಯವರೆಗೂ ಯಾಕೆ ಆಗಿಲ್ಲ..? ಮಹದಾಯಿ ಕ್ಲೇಯರೆನ್ಸ್ ಯಾಕೆ ಕೋಡಲಾಗುತ್ತಿಲ್ಲ..?
ರಾಜ್ಯ ಸರ್ಕಾರಕ್ಕೆ ಕೇಂದ್ರ ರೈಟಿಂಗ್ನಲ್ಲಿ ನೀಡಲಿ. ಎನ್ವಿರಾನ್ಮೆಂಟ್ ಕ್ಲೇಯರೆನ್ಸ್ ನೀಡಲು ಇಷ್ಟು ಮರಗಳ ಕಡಿಬೇಕಾಗುತ್ತೆ ಅಂತಾ ತಿಳಿಸಲಿ ಎಂದು ಸವಾಲು ಹಾಕಿದರು.

ಕೇಂದ್ರ ಮಂತ್ರಿಗಳು ರಾಜ್ಯಕ್ಕೆ ಬರೋದು ಸರ್ಕಾರಕ್ಕೆ ಬಯೋದೇ ಕೆಲಸವಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಟೆರಿಸ್ಟ್ ಅಟ್ಯಾಕ್ ಆಗಿವೆ. ಅದರ ಬಗ್ಗೆ ಜೋಶಿಯವರು ಮಾತ್ಡಾರೋ..?
ಈ ಹಿಂದೆ ಕರ್ನಾಟಕ, ಗೋವಾ , ಕೇಂದ್ರ, ಜತೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯವರದೇ ಸರ್ಕಾರಗಳಿದ್ವು.
ಅಂದು ಮಹದಾಯಿ ಯಾವುದೇ ಕ್ಲೇರೆನ್ಸ್ ಕೊಡಲಿಲ್ಲ. ಇತ್ತೀಚೆಗೆ ಬೇರೆ ರಾಜ್ಯಕ್ಕೆ ಪಾವರ್ ಲೈನ ಹೋಗಲಿಕ್ಕೆ ಕ್ಲೇಯರೆನ್ಸ್ ನೀಡಿದ್ದಾರೆ. ನಮ್ಮ ರಾಜ್ಯದ ಮಹದಾಯಿಗೆ ಕ್ಲೇಯರೆನ್ಸ್ ನೀಡೋಕ್ಕೆ ಬಿಜೆಪಿ ಯಾಕೆ ಆಗುತ್ತಿಲ್ಲ..? ಜೋಶಿಯವರು ಮೊದಲು ಇದರ ಬಗ್ಗೆ ಮಾತಾಡಲಿ‌.
ಈಗ ಮಹದಾಯಿ ವಿಚಾರವಾಗಿ ಸರ್ವ ಪಕ್ಷ ನಿಯೋಗ ಹೋಗುತ್ತಿದೆ.
ಈ ಹಿಂದೆ ಇವರು ಐದು ವರ್ಷ ಅಧಿಕಾರದಲ್ಲಿದ್ದಾಗ ಏನ ಮಾಡಿದ್ರೂ..? ಪೆಂಡಿಂಗ್ ವರ್ಕ ರಾತ್ರೋ ರಾತ್ರೀ ಮೋದಿಯವರು ಕ್ಲೇಯರ್ ಮಾಡ್ತಾರಂತೆ. ಮಹದಾಯಿದೊಂದು ಅಪ್ರೂ ಮಾಡಲಿ ಎಂದರು.

ನಾಲ್ಕು‌ ಲಕ್ಷ ಐದು ಲಕ್ಷ ಮನೆ ನಿರ್ಮಿಸಿದ್ದೇವೆ ಎಂದು ಬಿಜೆಪಿಯವರು ಹೇಳಿದ್ದಾರೆ.ಎಲ್ಲಿವೆ ಆ ಮನೆಗಳು..? ಪಡಿತರ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ‌ ದುಡ್ಡಿಲ್ಲ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ‌ಪ್ರತಿಕ್ರಿಯೇ‌ ನೀಡಿದ ಅವರು, ಪುಡ್ ಸೆಕ್ಯೂರಿಟಿ ಬಿಲ್ ತಂದವರು ನಾವು.ಮೋದಿ ಅಕ್ಕಿ ಮೋದಿ‌ ಅಕ್ಕಿ ಅಂತಿದ್ದಾರೆ.ಆಹಾರ ಭದ್ರತೆ ಕಾಯ್ದೆ ತಂದೆ ನಾವು. ಈಗ ಪಡಿತರ ಅಕ್ಕಿ ಕೊಡಲು ಸಿದ್ದವಾಗಿರೋ ಕೇಂದ್ರ, ಈ ಹಿಂದೆ ಯಾಕೆ ನೀಡಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಹಿಂದೆ ಯಾಕೆ ಅಕ್ಕಿ ಕೊಡಲಿಲ್ಲ‌ ಹೇಳಲಿ. ಈಗ ಕೊಡತ್ತೇವೆ ಅಂತಿದ್ದಾರೆ . ಅಲ್ವಾ ಈ ಹಿಂದೆ ಯಾಕೆ ಕೊಡಲಿಲ್ಲ. ಈಗ ಯಾಕೆ ಕೊಡಲು ಒಪ್ಪಿಕೊಂಡರು ರೈಟ್ನಿಂಗ್‌ನಲ್ಲಿ ಜೋಶಿಯವರು ಉತ್ತರ ನೀಡಲಿ ಎಂದರು.

ವರದಿ:-ಸುದೀರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!