ಮುದಗಲ್: ಪಟ್ಟಣದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯು ಸಂಭ್ರಮದಿಂದ ಜರುಗಿತು ಸಂಸ್ಥೆಯ ಅಧ್ಯಕ್ಷರಾದ ಸೈಯದ್ ಪಾಷಾ ಹುಸೇನಿ, ಕಾರ್ಯದರ್ಶಿಗಳಾದ ಬಂದೇ ನವಾಜ್ ಬಡಿಗೇರ್, ಆಡಳಿತ ಅಧಿಕಾರಿಗಳಾದ ಮೆಹಬೂಬ್ ಕಂದಗಲ್ ವಿದ್ಯಾರ್ಥಿ ಪ್ರತಿನಿಧಿ ಸ್ಪೂರ್ತಿ ಗಂಗಾವತಿ ಹಾಗೂ ಫೈಜಲ್ ದೇಸಾಯಿ ನೆಹರೂರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮತ್ತು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಗಳಾದ ಮಹೆಬೂಬ್ ಕಂದಗಲ್ ಮಾತನಾಡಿ ನೆಹರೂ ರವರ ಸರಳತೆ, ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನೀವುಗಳೆಲ್ಲಾ ಆದರ್ಶ ವ್ಯಕ್ತಿಗಳಾಗಬೇಕು.ಮಕ್ಕಳ ಬಗೆಗಿನ ಪ್ರೀತಿ ,ವಾತ್ಸಲ್ಯ ಹೊಂದಿದ ನೆಹರೂರವರು ರಾಜಕೀಯ ಲಾಭಕ್ಕಾಗಿ ಹಾತೊರೆದವರಲ್ಲ ಎಂದು ಹೇಳಿದರು. ಅದಲ್ಲದೆ ಕಾರ್ಯಕ್ರಮದಲ್ಲಿ ಮಕ್ಕಳೇ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಲಾಯಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತೋಷದಿಂದ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಮ್ಜದ್ ಕಂದಗಲ್, ಶ್ರೀಮತಿ ಭುವನೇಶ್ವರಿ,ಪರ್ವೇಜ್ ಹುಸೇನ್ ,ಚಾಂದ್ ಪಾಷಾ ಶ್ರೀಮತಿ ಸುನಿತಾ, ಇನ್ನುಳಿದ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕುಂಬಾರ