
ಭಾಲ್ಕಿ : ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಿಮ್ಮ ಸಾಮಾಜಿಕ ಸೇವೆ ಮತ್ತು ಸಂಘಟನೆ ಮೇಲಿನ ಅಭಿಮಾನವನ್ನು ಗಮನಿಸಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ಪರವಾಗಿ ನಾಡಿನ ನೆಲ, ಜಲ, ಗಡಿ, ಭಾಷೆ, ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆ ಜೊತೆಗೆ ಸಾಮಾಜಿಕ ಕಳಕಳಿಯಿಂದ ಕಾನೂನಿನ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಸಮಾಜದ ಅಶಕ್ತ ಜನರಿಗೆ ಧ್ವನಿಯಾಗಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಹೊಸ ಹುರುಪಿನೊಂದಿಗೆ ಸೇವೆ ಸಲ್ಲಿಸಲು ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ, ಹಾಗೂ ರಾಜ್ಯಾಧ್ಯಕ್ಷ ಜೆ. ಶ್ರೀನಿವಾಸ, ರಾಜ್ಯ ಕಾರ್ಯಾಧ್ಯಕ್ಷ ಚಂದ್ರಪ್ಪ, ಬೀದರ್ ಜಿಲ್ಲಾ ಅಧ್ಯಕ್ಷ ಸಂಜು ತೊಳ್ಳೆ , ಜಿಲ್ಲಾ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಜಾಂತೆ, ಬೀದರ್ ತಾಲೂಕಾಧ್ಯಕ್ಷ ಪ್ರಭು ಶೆಟ್ಟಿ ಗಾದಿಗೆ ಇವರ ಆದೇಶದ ಮೇರೆಗೆ ಸಂತೋಷ್ ಬಸವರಾಜ ಪಾಟೀಲ್ ಅವರನ್ನು ಭಾಲ್ಕಿ ತಾಲೂಕ ಅಧ್ಯಕ್ಷರನ್ನಾಗಿ ಆಡಳಿತಾತ್ಮಕ ದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಕಾರ್ಯ ನಿರ್ವಹಿಸತಕ್ಕದ್ದು. ತಾವು ಹೊಂದಿರುವ ಹುದ್ದೆಯೊಂದಿಗೆ ಸದಸ್ಯತ್ವ ಅಭಿಮಾನವನ್ನು ಮಾಡಿಸಿ, ಸಂಘಟನೆಗೆ ಒಳ್ಳೆಯ ಹೆಸರು ತರುವಂತಹ ಸದಸ್ಯರನ್ನು ಸೇರಿಸಿ, ಕಾರ್ಯಕ್ರಮವನ್ನು ಮಾಡಲು ಮತ್ತು ಸಂಘಟನೆಯಲ್ಲಿ ಕರ್ತವ್ಯ ನಿರ್ವಹಿಸಲು ಈ ಮೂಲಕ ಅನುಮತಿ ನೀಡಲಾಗಿದೆ.




