ಸಾನ್ಯಾ ಅಯ್ಯರ್ (Sanya Iyer) ಕನ್ನಡ ಕಿರುತೆರೆಗೆ ಬಲು ಚಿರಪರಿಚಿತವಾದ ಮುಖ. ಯಾಕಂದ್ರೆ ಪುಟ್ಟ ಗೌರಿಯ ಮದುವೆ ಸೀರಿಯಲ್ ನಲ್ಲಿ ಪುಟ್ಟ ಗೌರಿಯಾಗಿ, ಮುದ್ದಾಗಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದರು ಈ ಬಾಲ ನಟಿ. ನಂತರ ಜನರಿಗೆ ಹತ್ತಿರಾವಾಗಿದ್ದು ಬಿಗ್ ಬಾಸ್ ಮೂಲಕ.
ಬಿಗ್ ಬಾಸ್ ನ ಮೊದಲ ಒಟಿಟಿ ಹಾಗೂ ಬಿಗ್ ಬಾಸ್ ಸೀಸನ್ 9 (Bigg Boss Season 9) ರಲ್ಲಿ ಸ್ಪರ್ಧಿಸಿ, ತಮ್ಮ ಸ್ಟೈಲ್ ಸೌಂದರ್ಯದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದರು ಸಾನ್ಯಾ ಅಯ್ಯರ್. ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಜೋಡಿ ಕೂಡ ಜನಪ್ರಿಯತೆ ಪಡೆದಿತ್ತು.
ಬಿಗ್ ಬಾಸ್ ನಿಂದ ಹೊರ ಬರುತ್ತಿದ್ದಂತೆ ಸಾನ್ಯಾ ಅಯ್ಯರ್ ಗೆ ಹೊಸ ಸಿನಿಮಾದಲ್ಲಿ ನಟಿಸುವ ಬಹುದೊಡ್ಡ ಅವಕಾಶ ಕೂಡ ಸಿಕ್ಕಿತ್ತು. ಇಂದ್ರಜಿತ್ ಲಂಕೇಶ್ (Indrajeet Lankesh) ನಿರ್ದೇಶನದ ಗೌರಿ ಸಿನಿಮಾದಲ್ಲಿ, ಸಮರ್ಜಿತ್ ಲಂಕೇಶ್ ಗೆ ನಾಯಕಿಯಾಗಿದ್ದು ಸಾನ್ಯಾ ಅಯ್ಯರ್. ಸಿನಿಮಾ ಬಿಡುಗಡೆಗೆ ಮುನ್ನ ಸದ್ದು ಮಾಡಿತ್ತು. ಆದರೆ ಕಥೆ ಅಷ್ಟಾಗಿ ಗಟ್ಟಿ ಇರದಿದ್ದ ಕಾರಣ ಗೆಲ್ಲುವಲ್ಲಿ ವಿಫಲವಾಗಿತ್ತು.
ಆದರೆ ಈ ಸಿನಿಮಾ ಬಳಿಕಾ ಸಾನ್ಯಾ ಕನ್ನಡ ಚಿತ್ರರಂಗದಲ್ಲಿ ಮಿಂಚಲಿದ್ದಾರೆ ಎನ್ನುವ ಭರವಸೆ ಮಾತ್ರ ಜನರಿಗಿತ್ತು, ಆದರೆ ನಟಿ ಆಮೇಲೆ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಕಾರ್ಯಕ್ರಮಗಳಲ್ಲಿ, ಸೆಲೆಬ್ರಿಟಿ ಶೋಗಳಲ್ಲಿ (celebrity Show) ಕಾಣಿಸಿಕೊಳ್ಳುವ ಸಾನ್ಯಾ, ಹೊಸ ಸಿನಿಮಾ ಸುದ್ದಿ ಮಾತ್ರ ಕೊಡ್ತಾನೆ ಇಲ್ಲ.
ಸಿನಿಮಾ, ನಟನೆಯಿಂದ ದೂರ ಇದ್ದರೂ ಸಹ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸಾನ್ಯಾ, ಹೆಚ್ಚಾಗಿ ತಮ್ಮ ಫೋಟೊ ಶೂಟ್, ಅಮ್ಮನ ಜೊತೆಗಿನ ಟ್ರಾವೆಲ್ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ.
ಕಡು ಹಸಿರು ಬಣ್ಣದ ಲಾಂಗ್ ಸ್ಕರ್ಟ್ ಮತ್ತು ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಸ್ಟೈಲ್ ಆಗಿ ಪೋಸ್ ಕೊಟ್ಟಿದ್ದು, ಇದರ ಜೊತೆಗೆ . ಸಾನ್ಯಾ ಈ ಫೋಟೊ ನೋಡಿದ್ರೆ, ಪಡ್ಡೆಗಳ ಕನಸಿನಲ್ಲಿ ಆಕೆ ಬರೋದು ಗ್ಯಾರಂಟಿ.