*ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸಸಿ ನೀಡುವ ಕಾರ್ಯಕ್ರಮ*
ಬಾಗಲಕೋಟೆ ಜಿಲ್ಲಾ ಪೊಲೀಸ್ ವತಿಯಿಂದ 2024ನೇ ಸಾಲಿನಲ್ಲಿ ಸುಮಾರು 12000 ಸಸಿಗಳನ್ನು ನೆಡುವ ಯೋಜನೆ ಹಾಕಿಕೊಳ್ಳ ಲಾಗಿತ್ತು.
ಇದರ ಅಂಗವಾಗಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಕಚೇರಿ ಆವರಣ, ಡಿಎಆರ್ ಹಾಗೂ ಎಲ್ಲಾ ಠಾಣೆಗಳ ಆವರಣಗಳಲ್ಲಿ ಸಸಿಗಳನ್ನು ನೆಡಲಾಯಿತು.
ಬಾಗಲಕೋಟೆಯ ಜಿಲ್ಲಾ ಪೊಲೀಸ್ ಅಧಿಕಾರಿಗಳ ಈ ಒಂದು ಕಾರ್ಯಕ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ ಪಡಿಸಿದರು. ಗಿಡಗಳನ್ನು ಬೆಳೆಸಿ ನಾಡು ಹಸಿರಾಗಿಸಿ.
ನಮಗೆ ಕುಡಿಯಲು ನೀರು ಎಷ್ಟು ಪ್ರಮುಖವಾಗಿದೆ, ಹಾಗೆ ಉಸಿರಾಡಲು ಗಾಳಿ ಕೂಡ ತುಂಬಾ ಪ್ರಮುಖವಾದ ಪಾತ್ರವಹಿಸುತ್ತದೆ. ಸ್ವಚ್ಛ ಗಾಳಿ ಸ್ವಚ್ಛ ಪರಿಸರಕ್ಕೆ, ಸಸಿಗಳು, ಗಿಡ, ಮರಗಳು ತುಂಬಾ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಸಸಿಗಳು ನೀಡುವ ಮೂಲಕ ಈ ಒಂದು ಕಾರ್ಯಕ್ರಮ ಯಶಸ್ವಿಗೊಳಿಸಲಾಗಿದೆ.
ವರದಿ : ಮಂಜುನಾಥ ರಜಪೂತ