ಸೇಡಂ: ತಾಲೂಕಿನ ಜಾಕನಪಲ್ಲಿ ಸರಕಾರಿ ಪ್ರೌಡ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದ ನಿಮಿತ್ಯ
ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಘಟಕ ಸೇಡಂ ವತಿಯಿಂದ ಸಸಿ, ಹೂವಿನ ಗಿಡ ನೆಡುವ ಕಾರ್ಯಕ್ರಮ ಮತ್ತು ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಗವಿಸಿದ್ದಲಿಂಗೇಶ್ವರ ಸ್ವಾಮೀಜಿ ಯವರು ತಾಯಿ ಭುವನೇಶ್ವರಿ ದೇವಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು, ಶಾಲೆಯ ಮುಖ್ಯ ಗುರುಗಳಾದ ಸುಧಾಮಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ನಿರೂಪಣೆ ಸಹ ಶಿಕ್ಷಕರಾದ ಅಮೃತ್ ಕುಮಾರ್ ಅವರು ಮಾಡಿದರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಮ್ಮಾರೆಡ್ಡಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದಾ ಸ್ವಾಮಿ ಬಿ ಹಿರೇಮಠ ಅವರು ಪ್ರಸ್ತಾವಿಕ ನುಡಿ ಮಾತನಾಡಿ ಸೇಡಂ ತಾಲೂಕಿನ ಜಾಕನಪಲ್ಲಿ ಗ್ರಾಮದ ಶ್ರೀ ಗವಿ ಸಿದ್ದಲಿಂಗೇಶ್ವರ ದೇವಾಲಯ ಗ್ರಾಮದಲ್ಲಿ ಇರುವುದು ಬಹುದೊಡ್ಡ ಪುಣ್ಯದ ಗ್ರಾಮ ಇದಾಗಿದೆ. ಆದರೆ ದುರ್ದೈವ ಎಂದರೆ ಈ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಕನ್ನಡ ಭಾಷೆ ಮಾತನಾಡುವುದನ್ನು ಬಿಟ್ಟು ತೆಲುಗು ಭಾಷೆಕ್ಕೆ ಅವಲಂಬಿತಗೊಂಡಿದ್ದಾರೆ ಇಂತಹ ಪುಣ್ಯ ಕ್ಷೇತ್ರದಲ್ಲಿ ನಮ್ಮ ನಾಡು ನುಡಿ ಭಾಷೆ ಬೆಳೆಸುವುದರ ಜೊತೆಗೆ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ವನ್ನು ಬೆಳೆಸೋಣ ಎಂದು ತಿಳಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ದೇವೇಂದ್ರ ನಾಯಕ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವರದಾ ಸ್ವಾಮಿ ಅವರು ಮಾಡುತ್ತಿರುವುದರಲ್ಲಿ ಮೂರು ತಿರುವು ಕಾಣುತ್ತಿವೆ ಒಂದು ಕನ್ನಡ ಬಳಸಬೇಕು ಎರಡನೇದು ಕನ್ನಡ ಉಳಿಸಬೇಕು ಮೂರನೇದು ಹಸಿರೇ ಉಸಿರು ಎನ್ನುವಂತಾಗಬೇಕು ಎಂಬ ಉದ್ದೇಶದಿಂದ ಇಂಥ ಕಾರ್ಯಕ್ರಮಗಳು ಮಾಡುತ್ತಿದ್ದಾರೆ ಎಂದು ಹೇಳಿದರು.
ಗ್ರಾಮದ ಹಿರಿಯ ಮುಖಂಡರು ಶಿಕ್ಷಣ ಪ್ರೇಮಿಗಳು ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ್ ಅವರು ಈ ಮುಧೋಳ, ಕೋಲ್ಕುಂದ ವಲಯದಲ್ಲಿ ಸಂಘಟನೆಯ ಮೂಲಕ ವರದಾ ಸ್ವಾಮಿ ಬಟಗೇರ ಅವರು ಕನ್ನಡ ಭಾಷೆ ಜಾಗೃತಗೊಳಿಸುವ ಸಲುವಾಗಿ ಶಾಲೆ ಆವರಣಗಳಲ್ಲಿ ಸಸಿ ನೆಡುತ್ತಾ ಬರುತ್ತಿದ್ದಾರೆ ಇವರ ಕಾರ್ಯಕ್ಕೆ ನನ್ನ ಮೆಚ್ಚುಗೆ ಇರುತ್ತದೆ ಎಂದು ತಿಳಿಸಿದರು.
ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಿದ್ದಪ್ಪ ವಿಶ್ವಕರ್ಮ, ವೀರಣ ಗೌಡ ಸಮೂಹ ಸಂಪನ್ಮೂಲ ಕೇಂದ್ರ ಮದನಾ, ಮಲ್ಲಯ್ಯ ಸ್ವಾಮಿ ಬಟಗೇರ, ಗ್ರಾಮದ ಸಂಘಟನೆ ಮುಖಂಡರು ಜಾಕನಪಲ್ಲಿ ಮಹೇಶ ರೆಡ್ಡಿ, ಕರವೇ ಮುಖಂಡರು ಅನಂತಪ್ಪ ದೊರೆ, ಶಿಕ್ಷಣ ಪ್ರೇಮಿಗಳು ವಿರಾರೆಡ್ಡಿ ಗ್ರಾಮ ಪಂಚಾಯತ್ ಸದಸ್ಯರು, ಭೀಮಶಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ನರೇಶ್ ಗುಂಡೆಪಲ್ಲಿ ಗಾಯಕರು, ಸಹ ಶಿಕ್ಷಕರುಗಳು ಮತ್ತು ಶಾಲಾ ಮಕ್ಕಳು ಮತ್ತು ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದರು. ಅತಿಥಿ ಶಿಕ್ಷಕರಾದ ಮಹೇಶ್ ಅವರು ವಂದನಾಪಣೆ ಮಾಡಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




