Ad imageAd image

ಸರ್ದಾರ ವಲ್ಲಬಾಯಿ ಪಟೇಲ ಜನ್ಮದಿನ: ಗೋಕಾಕದಲ್ಲಿ ಎಕತಾ ಓಟ

Bharath Vaibhav
ಸರ್ದಾರ ವಲ್ಲಬಾಯಿ ಪಟೇಲ ಜನ್ಮದಿನ: ಗೋಕಾಕದಲ್ಲಿ ಎಕತಾ ಓಟ
WhatsApp Group Join Now
Telegram Group Join Now

ಗೋಕಾಕ: ನಗರದಲ್ಲಿ ದೇಶದ ಪ್ರಪ್ರಥಮ ಗೃಹ ಸಚಿವ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಗೋಕಾಕ ಪೋಲಿಸ್ ಉಪವಿಭಾಗ ವತಿಯಿಂದ ಹಮ್ಮಿಕೊಂಡಿದ್ದ ಏಕತಾ ಓಟ ಕ್ಕೆ ಗೋಕಾಕ ತಹಸಿಲ್ದಾರ ಡಾ: ಮೊಹನ‌ಬಸ್ಮೆ ಮತ್ತು ಡಿಎಸ್ಪಿ ರವಿ ನಾಯಕ ಇವರು ಏಕತಾ ಒಟಕ್ಕೆ ಹಸಿರು ನಿಶಾನೆ‌ ತೋರಿ ಚಾಲನೆ ನೀಡಿದರು.

ಇವತ್ತು ನಡೆದ ಎಕತಾ ಒಟದಲ್ಲಿ ಪೊಲೀಸರು,ವಿವಿದ ಶಾಲೆಗಳ‌‌ ವಿಧ್ಯಾರ್ಥಿ,ವಿದ್ಯಾರ್ಥಿನಿಯರು ,ಹಳ್ಳಿಗಳಿಂದ ಆಗಮಿಸಿದ ಯುವಕರು, ಪತ್ರಕರ್ತರು ರೈತರು ಕೂಡ ಏಕತಾ ಓಟದಲ್ಲಿ ಬಾಗಿಯಾಗಿದ್ದು ವಿಶೇಷವಾಗಿತ್ತು.

ಬಸವೇಶ್ವರ ವೃತ್ತದಿಂದ ಆರಂಭವಾದ ಓಟವು ಬ್ಯಾಳಿ ಕಾಟಾ,ನಾಕಾ ನಂಬರ 1, ಎಸ್ 4 ಆಸ್ಪತ್ರೆಗೆ ಹೋಗಿ ಅಲ್ಲಿಂದ ಪೋಲಿಸ ಸಿಬ್ಬಂದಿಯಿಂದ ಚೀಟಿ ಪಡೆದು ತಿರುಗಿ ಎಪಿಎಮ್ ಸಿ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ 8 ಕಿಲೊ ಮಿಟರ ಒಟ ಸಂಪನ್ನಗೊಂಡಿತು.

ಇನ್ನು ಈ ಓಟದಲ್ಲಿ ಪ್ರಥಮ ,ದ್ವೀತಿಯ ,ತೃತೀಯ ಸ್ಥಾನ ಪಡೆದುಕೊಂಡವರಿಗೆ ನಗದು ಬಹುಮಾನದ ಜೊತೆಯಲ್ಲಿ ಟ್ರಾಫಿ ನೀಡಿ ಶುಭ ಕೊರಿದರು ಅಷ್ಟೆ ಅಲ್ಲ ಎಕತಾ ಓಟದಲ್ಲಿ ಬಾಗಿಯಾದ 8 ಸ್ಥಾನ ಪಡೆದವರಿಗೆ ಸಮಾಧಾನಕರ ಬಹುಮಾನ ನೀಡಿದರು.ಇನ್ನು 52 ವರ್ಷದ ರೈತ 5 ನೆ ಸ್ಥಾನ ಪಡೆದು ಹೊಲದಲ್ಲಿ ಸೈ, ಓಟದಲ್ಲೂ ಸೈ ಎಂದು ತೊರಿಸಿಕೊಟ್ಟರು.

ಈ ಸಂದರ್ಭದಲ್ಲಿ ನಗರ ಸಭೆ ಆಯುಕ್ತ ರವಿ ರಂಗಸುಬೆ, ಸಿಪಿಆಯ್ ಸುರೇಶಬಾಬು,
ಪಿಎಸ್ಐ ಕೆ,ವಾಲಿಕಾರ, ತಾಲೂಕಾ ಕ್ರೀಡಾ ಸಂಯೊಜಕ ತೊರನಗಟ್ಟಿ, ಪಿಎಸ್ಐ ಯಮನಪ್ಪಾ ಮಾಂಗ,ಕಿರಣ ಡಮಾಮಗರ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು,
ಇನ್ನು ಪೋಲಿಸ್ ಇಲಾಖೆಯಿಂದ ಎಕತಾ ಓಟದಲ್ಲಿ ಬಾಗಿಯಾದವರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿದ್ದರು. ಅದರ ಜೊತೆಯಲ್ಲಿ ಕೇವಲ ಒಂದೆ ದಿನದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದ ಹವಾಲ್ದಾರ ಕುಮಾರ ಇಳಿಗೇರ ಹಾಗೂ ಸಿಬ್ಬಂದಿ ಮಂಜು ಹುಚಗೌಡರ ಇವರಿಗೆ ಅಧಿಕಾರಿಗಳು,ಒಟದಲ್ಲಿ ಬಾಗಿಯಾದ ಸ್ಪರ್ದಾಳುಗಳು ಶುಭ ಕೊರಿದರು.

ವರದಿ: ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!