ಸ್ಲಗ್ ಸ್ವಚ್ಛ ಸುಂದರ ಸದಲಗಾ ನಿರ್ಮಾಣಕ್ಕೆ ಬದ್ಧ. ಶಾಸಕರ ಸದಸ್ಯರ ಸಹಕಾರ್ಯದಿಂದ ಅಭಿವೃದ್ಧಿಗೆ ಚಾಲನೆ. ಮುಖ್ಯಾಧಿಕಾರಿ ಶಿವಾನಂದ ಭೋಸಲೆ ಅಭಿಮತ
ನಿಪ್ಪಾಣಿ: ಸ್ಥಳೀಯ ಶಾಸಕರು ಸಂಸದರು ಪುರಸಭೆಯ ಆಡಳಿತ ಮಂಡಳಿಯ ಸದಸ್ಯರ ಸಹಕಾರ್ಯ ಒಮ್ಮತದ ನಿರ್ಧಾರದೊಂದಿಗೆ ಸದಲಗಾ ಪುರಸಭೆಯ ವತಿಯಿಂದ ಪಾರದರ್ಶಕ ಆಡಳಿತದೊಂದಿಗೆ ಜನತೆಯ ಮೂಲಭೂತ ಸಮಸ್ಯೆಗಳಾದ ಕುಡಿಯುವ ನೀರುಪೂರೈಕೆ ಸ್ವಚ್ಛತೆ ಚೌಚಾಲಯ ರಸ್ತೆ ಡಾಂಬರೀಕರಣ ವಿದ್ಯುತ್ ಪೂರೈಕೆಗಳಂತಹ ಮೂಲಭೂತ ಸಮಸ್ಯೆಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದು ಸ್ವಚ್ಛ ಸುಂದರ ಸದಲಗಾ ನಿರ್ಮಾಣಕ್ಕೆ ತಾವು ಬದ್ಧರಾಗಿರುವುದಾಗಿ ಪುರಸಭೆ ಮುಖ್ಯ ಅಧಿಕಾರಿ ಶಿವಾನಂದ ಭೋಸಲೆ ತಿಳಿಸಿದರು. ಸದಲಗಾ ಪುರಸಭೆಯ ಕಾರ್ಯಾಲಯದಲ್ಲಿ ಬಿವಿ ಫೈವ್ ನ್ಯೂಸ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.

ಸ್ಥಳೀಯ ಶಾಸಕ ಗಣೇಶ ಹುಕ್ಕೇರಿ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸಂಸದೆ ಪ್ರಿಯಾಂಕ ಜಾರಕಿಹೊಳಿ ಯವರ ಪ್ರಯತ್ನದಿಂದ ಪಟ್ಟಣದ ಹೈಟೆಕ್ ಬಸ್ ನಿಲ್ದಾಣದಲ್ಲಿ ಫೆವರ್ ಬ್ಲಾಕ್ ಅಳವಡಿಕೆ. ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿಯ ದುರಸ್ತಿ ಕಾರ್ಯ, 15 ನೇ ಹಣಕಾಸು ಯೋಜನೆ ಅಡಿ ರತ್ನಪ್ಪ ಕುಂಬಾರ ಚೌಕದಲ್ಲಿ ನೂತನ ಬಸಸ್ಟಾಪ ನಿರ್ಮಾಣ,ಶುದ್ಧ ಕುಡಿಯುವ ನೀರು ಪೂರೈಕೆ ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ನಿರ್ಮಾಣ ಸೇರಿ ಅಭಿವೃದ್ಧಿ ಕಾಮಗಾರಿಗಳಿಗೆ ಒತ್ತು ನೀಡಿದ್ದು ಕಳೆದ ಅನೇಕ ವರ್ಷಗಳಿಂದ ಪುರಸಭೆಗೆ ಜೆಸಿಬಿ ಯಂತ್ರದ ಸಮಸ್ಯೆ ಉಂಟಾಗುತ್ತಿತ್ತು ಅದನ್ನ ಅರಿತು ಸದ್ಯ ಪುರಸಭೆಗೆ ಜೆಸಿಬಿ ಸೌಲಭ್ಯವನ್ನು ಒದಗಿಸಲಾಗಿದೆ. ಎಂದರು. ಒಟ್ಟಿನಲ್ಲಿ ಸ್ವಚ್ಛ ಸುಂದರ ಸದಲಗಾ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ವರದಿ:ಮಹಾವೀರ ಚಿಂಚಣೆ




