Ad imageAd image

ಮಾಂಗುರ ಗ್ರಾಮದಲ್ಲಿ 1 ಕೋಟಿ 60 ಲಕ್ಷ ರೂಪಾಯಿ ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಲೋಕಾರ್ಪನೆ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಅಭಿಮತ.

Bharath Vaibhav
ಮಾಂಗುರ ಗ್ರಾಮದಲ್ಲಿ 1 ಕೋಟಿ 60 ಲಕ್ಷ ರೂಪಾಯಿ ಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಲೋಕಾರ್ಪನೆ ವೇಳೆ ಶಾಸಕಿ ಶಶಿಕಲಾ ಜೊಲ್ಲೆ ಅಭಿಮತ.
WhatsApp Group Join Now
Telegram Group Join Now

ನಿಪ್ಪಾಣಿ:  ನನ್ನ ಮತ ಕ್ಷೇತ್ರದಲ್ಲಿ ಯಾವುದೇ ಧರ್ಮ ಜಾತಿ ಪಕ್ಷ, ಹಾಗೂ ಭಾಷೆಗೆ ಅಂಟಿಕೊಳ್ಳದೆ ಪಾರದರ್ಶಕ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು ಜನತೆಯ ಸಂಪೂರ್ಣ ಸಹಕಾರ ನನಗಿದ್ದು ದ್ರೋಹ ಬಗೆಯಲಾರೆ ನಿಷ್ಪಕ್ಷಪಾತ ಕಾರ್ಯನಿರ್ವಹಿಸುವೆ ಎಂದು ನಿಪ್ಪಾಣಿ ಮತಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದರು.

ಅವರು ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ CIRFNH ಹಾಗೂ PRED ಇಲಾಖೆಯ ಅನುದಾನದಡಿ ಮಂಜೂರಾದ 1 ಕೋಟಿ 60 ಲಕ್ಷ ರೂಪಾಯಿಗಳ ಕಾಮಗಾರಿಗಳ ಉದ್ಘಾಟನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾರಂಭದಲ್ಲಿ ಹಾಲ ಶುಗರ್ ನಿರ್ದೇಶಕ ಶ್ರೀಕಾಂತ್ ಕಣಗಲೆ ಯೂನುಸ್ ಮುಲ್ಲಾ ಪಿಎಲ್ ಡಿ ಬ್ಯಾಂಕಿನ ನಿರ್ದೇಶಕ ಸೂರಜ್ ಮಾಳಿ ನಿತೇಶ್ ಖೋತ, ಮಾತನಾಡಿ ಈಗಾಗಲೇ ಜೊಲ್ಲೆ ದಂಪತಿಗಳಿಂದ ಕ್ಷೇತ್ರದ ಪ್ರತಿ ಹಳ್ಳಿಗೂ ಶಾಲಾ ಕಟ್ಟಡ ವ್ಯಾಯಾಮ ಶಾಲೆ ಅಂಗನವಾಡಿ ಸಮುದಾಯ ಭವನ ಒಳಚರಂಡಿ ರಸ್ತೆ ಕುಡಿಯುವ ನೀರು ತೋಟಪಟಿ ರಸ್ತೆ ಪವರ್ ಬ್ಲಾಕ್ ಸೇರಿದಂತೆ 10 ಹಲವು ಕಾಮಗಾರಿಗಳನ್ನು ಮಾಡಿ ಮತಕ್ಷೇತ್ರದಲ್ಲಿಯೇ ಅಭಿವೃದ್ಧಿಯ ಅಧಿಕಾರ ಆಗಿದ್ದಾರೆ.

ಎಂದರು. ಇದೇ ಸಂದರ್ಭದಲ್ಲಿ ಲಿಂಗಾಯತ ಸಮಾಜದ ರುದ್ರಭೂಮಿಗೆ 5 ಲಕ್ಷ ಗರಡಿ ಮನೆಗೆ 15 ಲಕ್ಷ ರೂಪಾಯಿ ಹಾಗೂ ರಸ್ತೆ ಕಾಮಗಾರಿಗಾಗಿ 1 ಕೋಟಿ 45 ಲಕ್ಷ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು. ಸಮಾರಂಭದಲ್ಲಿ ಸುಜಾತ ಸೌದೆ ಅರವಿಂದ ಕರಡಿ ಪವನ್ ಪಾಟೀಲ್ ದೇವದತ್ತ ರಾಜಹಂಸ ಚಿಮಾಸು ನಾಡಗೆ ರಾಜು ಭದರಗಡೆ ಸೇರಿದಂತೆ ಕಾರದಗಾ ಬಾರವಾಡ ಮಾಂಗುರ ಗ್ರಾಮದ ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
Share This Article
error: Content is protected !!