ನಿಪ್ಪಾಣಿ : ತಾಲೂಕಿನ ಗಳತಗಾ ಗ್ರಾಮದ ಭೀಮ ನಗರದಲ್ಲಿಯ ದಲಿತ ಕಾಲೋನಿ ಮುಖ್ಯರಸ್ತೆಯಿಂದ ಬುದ್ಧ ವಿಹಾರ ರಸ್ತೆ ವಡ್ಡರ ಸಮಾಜದ ಹಾಗೂ ಮಾತಂಗ ಸಮಾಜದ ಸ್ಮಶಾನಭೂಮಿಗೆ ತೆರಳುವ ರಸ್ತೆಗಳ ಒಟ್ಟು 500 ಮೀಟರ್ ಉದ್ದ ಹಾಗೂ 13 ಅಡಿಗಳವರೆಗಿನ ವಿಸ್ತೀರ್ಣ ಸಿ.ಸಿ ರಸ್ತೆ ಕಾಮಗಾರಿಗೆ ಶಾಸಕಿ ಶಶಿಕಲಾ ಜೊಲ್ಲೆ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದ ಸಮಾಜ ಕಲ್ಯಾಣ ಇಲಾಖೆಯ ನಿರ್ಮಿತಿ ಕೇಂದ್ರದ ಅನುದಾನದಲ್ಲಿ 55ಲಕ್ಷ ರೂಪಾಯಿ ಮಂಜೂರಾಗಿದ್ದು ಶನಿವಾರ ಬೆಳಗ್ಗೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಹಾಲು ಶುಗರ್ ಸಕ್ಕರೆ ಕಾರ್ಖಾನೆ ನಿರ್ದೇಶಕ ಶ್ರೀಕಾಂತ ಬನ್ನಿ ಮಾತನಾಡಿ ನಿಪ್ಪಾಣಿ ಮತಕ್ಷೇತ್ರದ ದಲಿತ ಸಮಾಜಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಜಲ್ಲೆ ದಂಪತಿಗಳು ಸತತ ಪ್ರಯತ್ನ ಸದ್ಯ ಮಂಜೂರಾದ 55 ಲಕ್ಷ ರೂಪಾಯಿಗಳ ಸಿಸಿರಸ್ತೆ ಕಾಮಗಾರಿಯನ್ನು ದರ್ಜೆಯುತವಾಗಿ ನಿರ್ಮಿಸಲು ದಲಿತ ವಸತಿಯ ಪರವಾಗಿ ಅಜಿತ ತಾಶೀಲ್ದಾರ ನಿರ್ಮಿತಿ ಕೇಂದ್ರದ ಅಧಿಕಾರಿ ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪ್ರಾರಂಭದಲ್ಲಿ ಅನ್ನಪೂರ್ಣ ಐಹೊಳೆ ರಕ್ಷಿತಾ ಕಾಂಬಳೆ ಹಾಗೂ ವಸತಿಯ ಮಹಿಳೆಯರಿಂದ ಜೆಸಿಬಿ ಯಂತ್ರ ಪೂಜೆ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಅಲಗೌಡ ಪಾಟೀಲ್ ಸದಸ್ಯರಾದ ರವಿ ವಡ್ಡರ್ ಭರತ ನಸಲಾಪುರೆ ಶಿವಾನಂದ ಗಿಂಡೇ ಮಿಥುನ ಪಾಟೀಲ ಶ್ರವಣ ಐಹೊಳೆ ಅವರಿಂದ ಶ್ರೀಫಲಾರ್ಪನೆ ಹಾಗೂ ರಾಹುಲ್ ವಾಕ್ಪಟ್ಟೆ ಸಂಜು ಖೋತ, ಚನಗೌಡ ಪಾಟೀಲ ಅವಿನಾಶ ಪರಾಂಜಪೆ, ಸುಧೀರ ದೀಕ್ಷಿತ ರಿಂದ ಗುದ್ದಲಿ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಲಕ್ಷ್ಮಣ ಕೋಟೆ ಕುಮಾರ ಸಕಪಾಳ ಶಿವಾನಂದ ಖೋತ ವಿಜಯ ತೇಲವೇಕರ ಮಹಾವೀರ ಕೋಟಬಾಗಿ ತಾತ್ಯಾಸಾಹೇಬ ಸದಲಗೆ ಆನಂದ ತಿಕೋಟೆ ಸೇರಿದಂತೆ ದಲಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ವರದಿ : ಮಹಾವೀರ ಚಿಂಚಣೆ



		
		
		
