Ad imageAd image

ಜಾತಿಗಣತಿ ವರದಿ ತರಾತುರಿಯಲ್ಲಿ ಜಾರಿ ಮಾಡಲ್ಲ : ಸತೀಶ್ ಜಾರಕಿಹೊಳಿ 

Bharath Vaibhav
ಜಾತಿಗಣತಿ ವರದಿ ತರಾತುರಿಯಲ್ಲಿ ಜಾರಿ ಮಾಡಲ್ಲ : ಸತೀಶ್ ಜಾರಕಿಹೊಳಿ 
satish jarkiholi
WhatsApp Group Join Now
Telegram Group Join Now

ಹುಬ್ಬಳ್ಳಿ : ಸದ್ಯ ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಗೆ ಕುರಿತು ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನಾಳೆ ವಿಶೇಷ ಸಂಪುಟ ಸಭೆ ಕರೆದಿದೆ. ನಾಳೆ ನಡೆಯುವ ಈ ಒಂದು ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಿಡುಗಡೆಯಾಗುವ ಕುರಿತಂತೆ ಮಹತ್ವದ ಚರ್ಚೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಾವುದೇ ಈ ಬಗ್ಗೆ ಸತೀಶ್ ಜಾರಕಿಹೊಳಿ ಕಾರಣಕ್ಕೂ ಸರ್ಕಾರ ತರಾತುರಿಯಲ್ಲಿ ಜಾತಿಗಣತಿ ವರದಿ ಜಾರಿ ಮಾಡ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಾಧಕ ಬಾಧಕಗಳ ಕುರಿತು ಚರ್ಚೆ ಮಾಡಿ ಸರ್ಕಾರ ಜಾತಿಗಣತಿ ವರದಿ ಜಾರಿ ಕುರಿತು ನಿರ್ಧರಿಸಲಿದೆ.

ತರಾತುರಿಯಲ್ಲಿ ಜಾರಿ ಮಾಡಲ್ಲ. ಇದರ ಹಿಂದೆ ಯಾವುದೇ ರಾಜಕೀಯ ಲಾಭ ಆಗಲಿ ಅಥವಾ ನಷ್ಟ ಇಲ್ಲ. ಕೆಲವರು ಬಹಿರಂಗವಾಗಿ ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ ಈ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆದರೆ ಸೂಕ್ತ. ಈ ಕುರಿತು ಬಹಿರಂಗ ಚರ್ಚೆಯಾಗುವುದು ಒಳ್ಳೆಯದು ಎಂದು ತಿಳಿಸಿದರು.

ಇನ್ನು ಇಂದು ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಇರುವ ರಾಜ್ಯಗಳಲ್ಲಿ ಸರ್ಕಾರ ಕೆಡುವಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮೊದಲ ದಿನದಿಂದ ನಾನು ಸಹ ಇದನ್ನೇ ಹೇಳುತ್ತಿದ್ದೇನೆ ಕೊನೆಯ ದಿನದವರೆಗೂ ಸರ್ಕಾರ ಕೆಡುವಲು ಯತ್ನಿಸುತ್ತಾರೆ. ನಾವು 140 ಶಾಸಕರಿದ್ದೇವೆ ಯಾವುದೇ ಆತಂಕ ಇಲ್ಲ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
Share This Article
error: Content is protected !!