Ad imageAd image

ಈಗ ಸಿಎಂ ಆಕಾಂಕ್ಷಿಯಲ್ಲ. ಮುಂದಿನ 2028 ರ ಚುನಾವಣೆಯಲ್ಲಿ ಸಿಎಂ ಆಗಬೇಕು : ಸತೀಶ್ ಜಾರಕಿಹೊಳಿ

Bharath Vaibhav
ಈಗ ಸಿಎಂ ಆಕಾಂಕ್ಷಿಯಲ್ಲ. ಮುಂದಿನ 2028 ರ ಚುನಾವಣೆಯಲ್ಲಿ ಸಿಎಂ ಆಗಬೇಕು : ಸತೀಶ್ ಜಾರಕಿಹೊಳಿ
satish jarkiholi
WhatsApp Group Join Now
Telegram Group Join Now

ಬೆಂಗಳೂರು : ಸಿಎಂ ಬದಲಾವಣೆಯ ಮಾಡೋದಿಲ್ಲ ಎಂದು ಸ್ವತಃ ಹೈಕಮಾಂಡ್ ಹೇಳಿದ್ದು, ಅದರಂತೆ ಸಿಎಂ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ, ಆದರೆ 2028ಕ್ಕೆ ನಾನು ಸಿಎಂ ಆಗಬೇಕು ಎಂಬ ಬಯಕೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.ಈ ಬಗ್ಗೆ ಮಾತನಾಡಿದ ಅವರು, ಈಗಾಗಲೇ ಹೈಕಮಾಂಡ್ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ನವರು ರಾಜೀನಾಮೆ ಕೂಡ ಕೊಡೋದಿಲ್ಲ. ರಾಜೀನಾಮೆ ನೀಡುತ್ತಾರೆ ಅನ್ನೋದು ಊಹಾಪೋಹವಷ್ಟೇ ಎಂದು ಹೇಳಿದರು.

ದಲಿತ ನಾಯಕರು ಆಗಾಗ ಸಭೆ ನಡೆಸುತ್ತಿದ್ದಾರೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರೆ ಒಂದಂತು ಸತ್ಯ ಪಕ್ಷದೊಳಗೆ ಸಿಎಂ ಬದಲಾವಣೆ ಬಗ್ಗೆ ಯಾವ ರೀತಿಯಲ್ಲಿ ಚರ್ಚೆಗಳು ನಡೆದಿಲ್ಲ. ಹಾಗಾಗಿ ಈ ರೀತಿಯ ಪ್ರಶ್ನೆ ಉದ್ಭವಿಸದು ಎಂದು ಜಾರಕಿಹೊಳಿ ಹೇಳಿದರು.

ಈಗ ನಾನು ಸಿಎಂ ಆಕಾಂಕ್ಷಿಯಲ್ಲ. ಆದರೆ ಮುಂದಿನ 2028 ರ ಚುನಾವಣೆಯಲ್ಲಿ ಸಿಎಂ ಆಗಬೇಕು ಎಂಬ ಆಸೆಯಿದೆ. ನನ್ನ ಮಗಳಿಗೂ ಅದೇ ಆಸೆ ಹೀಗಾಗಿ ಮುಂದಿನ ಚುನಾವಣೆಯ ವರೆಗೆ ಕಾಯೋಣ ಎಂದು ಅವಳೇ ಹೇಳಿದ್ದಾಳೆ ಎಂದು ಸತೀಶ್ ಹೇಳಿದ್ದಾರೆ.

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೊರಗಿನ ಚರ್ಚೆಗೆ ನಾನು ಉತ್ತರಿಸುವುದಿಲ್ಲ. ನನ್ನ ಹಲವು ಹಿತೈಷಿಗಳು ನಾನೇ ಸಿಎಂ ಎಂದು ಹೇಳಿದ್ದರೂ, ಅದು ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿದ ಮೇಲೆ ಅಷ್ಟೇ ಅಲ್ಲಿಯ ವರೆಗೆ ನಾನು ಏನು ಮಾತನಾಡೋದಿಲ್ಲ ಎಂದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!