
ಹುಕ್ಕೇರಿ: ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕಿನ ಬೆಣಿವಾಡ ಗ್ರಾಮದಲ್ಲಿರುವ ಚಂದನವನ ಉದ್ಯಾನಕ್ಕೆ ಭೇಟಿ ನೀಡಿದರು.
ಗ್ರಾಮೀಣ ಸೊಗಡಿನಿಂದ ಕೂಡಿರುವ ಈ ಸುಂದರ ಉದ್ಯಾನವನಕ್ಕೆ ಹೆಚ್ಚು ಪ್ರವಾಸಿಗರು ಭೇಟಿ ನೀಡಿ,ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮದಮಕ್ಕನಾಳ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಕುಂದುಕೊರತೆಗಳನ್ನು ಆಲಿಸಿದರು.
ವರದಿ: ರಾಜು ಮುಂಡೆ




