ಚಿತ್ರದುರ್ಗ : ಈಗಾಗಲೇ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಪವರ್ ಶೇರಿಂಗ್ ಕುರಿತು ಕಾಂಗ್ರೆಸ್ ನಾಯಕರು ಹಲವಾರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಮಧ್ಯ ಆಗಾಗ ದಲಿತ ಸಿಎಂ ಕೂಗು ಕೂಡ ಕೇಳಿ ಬರುತ್ತದೆ.
ಇದೀಗ ಪಿಡಬ್ಲ್ಯೂಡಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಜಾತ್ರೆಯಲ್ಲಿ ಬಾಳೆಹಣ್ಣಿನ ಮೇಲೆ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಎಂದು ಬರೆದು ರಥೋತ್ಸವಕ್ಕೆ ಎಸೆದು ಘೋಷಣೆ ಕೂಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಜಾತ್ರೆಯಲ್ಲಿ ಅಭಿಮಾನಿಗಳಿಂದ ಸತೀಶ್ ಜಾರಕಿಹೊಳಿ ನೆಕ್ಸ್ಟ್ ಸಿಎಂ ಎಂದು ಘೋಷಣೆ ಕೂಗಲಾಯಿತು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರ ಫೋಟೋ ಪ್ರದರ್ಶಿಸಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಅಲ್ಲದೆ ಬಾಳೆಹಣ್ಣಿನ ಮೇಲೆ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಬರೆದು ರಥದ ಮೇಲೆ ಬಾಳೆಹಣ್ಣು ಎಸೆದಿದ್ದಾರೆಸಚಿವ ಸತೀಶ್ ಬೆಂಬಲಿಗರು.