Ad imageAd image

ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ! ಸತೀಶ್ ಜಾರಕಿಹೊಳಿ ಭೇಟಿ!

Bharath Vaibhav
ಕಾರುಣ್ಯ ನೆಲೆ ವೃದ್ಧಾಶ್ರಮಕ್ಕೆ! ಸತೀಶ್ ಜಾರಕಿಹೊಳಿ ಭೇಟಿ!
WhatsApp Group Join Now
Telegram Group Join Now

ಸಿಂಧನೂರು : ಲೋಕೋಪಯೋಗಿ ಸಚಿವ ಸನ್ಮಾನ್ಯ ಸತೀಶ್ ಜಾರಕಿಹೊಳಿ ಅವರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಆಶ್ರಮದ ಎಲ್ಲಾ ಕೋಣೆಗಳನ್ನು ವೀಕ್ಷಿಸಿ ವೃದ್ಧ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಯೋಗಕ್ಷಮವನ್ನು ವಿಚಾರಿಸಿ ಆಶ್ರಮದ ನಿರ್ವಹಣೆ ಮಾಹಿತಿಯನ್ನು ಪಡೆದು ಕೊಂಡು ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಅನಾಥ ವೃದ್ಧರನ್ನು ಬುದ್ಧಿಮಾಂದ್ಯರನ್ನು ತನ್ನ ತಂದೆ ತಾಯಿ ಅಕ್ಕ-ತಂಗಿಯರಂತೆ ನೋಡಿಕೊಳ್ಳುವ ಚನ್ನಬಸವ ಸ್ವಾಮಿ ಹಿರೇಮಠರ ಸೇವೆ ಅಮೋಘವಾದದ್ದು ಇಂತ ಒಂದು ಆಶ್ರಮಕ್ಕೆ ಬಂದಿದ್ದು ನನ್ನ ಪುಣ್ಯ ಎಂದರು.

ಸಂದರ್ಭದಲ್ಲಿ ಆಶ್ರಮದ ಕಾನೂನು ಸಲಹೆಗಾರ ಜಿ. ರಾಯಪ್ಪ ವಕೀಲರು ಆಶ್ರಮಕ್ಕೆ ಸರಕಾರದಿಂದ ಸ್ವಂತ ನಿವೇಶ ನೀಡುವ ಕುರಿತು ಮನವಿ ಪತ್ರ ಸಲ್ಲಿಸಿದರು ಮನವಿಯನ್ನು ಪಡೆದು ಜಾರಕಿಹೊಳಿ ಸಾಹೇಬರು ಮಾತನಾಡಿ ಕಾರುಣ್ಯ ಶ್ರಮದ ಸೇವೆ ಅಮೋಘವಾಗಿದ್ದು ನೆಲೆ ಇಲ್ಲದ ವೃದ್ಧ ಜೀವಿಗಳಿಗೆ ಬುದ್ಧಿಮಾಂದ್ಯರಿಗೆ ಬದುಕು ಕಟ್ಟಿಕೊಟ್ಟಿರುವ ಈ ಆಶ್ರಮಕ್ಕೆ ಸ್ವಂತ ನಿವೇಶನ ಕಲ್ಪಿಸಿಕೊಡುವಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ, ಸಂಸ್ಥಾಪಕದ ಅಮರಯ್ಯ ಸ್ವಾಮಿ ಹಿರೇಮಠ, ಡಾ. ಚನ್ನಬಸವಸ್ವಾಮಿ ಹಿರೇಮಠ, ಕರಿಬಸಯ್ಯಸ್ವಾಮಿ, ಕೆ, ಚಿದಾನಂದಪ್ಪ ಗೌಡ, ಜಿ. ರಾಯಪ್ಪ ವಕೀಲರು, ಮಲ್ಲಿಕಾರ್ಜುನ್ ಸ್ವಾಮಿ, ಅವಿನಾಶ್ ದೇಶಪಾಂಡೆ, ಆದೇಶ ನಾಯಕ, ಪ್ರದೀಪ್ ಪೂಜಾರಿ, ಮಂಜುನಾಥ್ ಗಾಣಿಗೇರ್, ಇನ್ನು ಅನೇಕರಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!