ಯಮಕನಮರಡಿ: ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಸನ್ಮಾನ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹೆಬ್ಬಾಳ ಗ್ರಾಮದಲ್ಲಿ ಸಮಾನತೆಯ ಸಂಕೇತ, ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯಮಕನಮರಡಿ ಬ್ಲಾಕ್ ಅಧ್ಯಕ್ಷರಾದ ಮಹಾಂತೇಶ್ ಮಗದುಮ್ಮ, ಚಿಕ್ಕೋಡಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಅಕ್ಷಯ ವೀರಮುಖ ಹಾಗೂ ಪ್ರಕಾಶ ಬಸ್ಸಾಪುರೆ, ಕುಶಾಲ ಕೋತ, ಪಪ್ಪುಗೌಡ ಪಾಟೀಲ, ಗುರುಲಿಂಗ ಹಿರೇಮಠ, ದೇವರಾಜ್ ಚೌಗಲ, ಸಮಸ್ತ ಗ್ರಾಮದ ಗುರು ಹಿರಿಯರು ನಾಗರಿಕರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ, ಯಮಕನಮರಡಿ