Ad imageAd image

ಚಿಕ್ಕೋಡಿ: ನಾಳೆ 2ನೇ ಸತೀಶ ಶುಗರ್‌ ಅವಾರ್ಡ್ಸ್‌ನ ಗ್ರ್ಯಾಂಡ್ ಫಿನಾಲೆ

Bharath Vaibhav
ಚಿಕ್ಕೋಡಿ: ನಾಳೆ 2ನೇ ಸತೀಶ ಶುಗರ್‌ ಅವಾರ್ಡ್ಸ್‌ನ ಗ್ರ್ಯಾಂಡ್ ಫಿನಾಲೆ
WhatsApp Group Join Now
Telegram Group Join Now

ಚಿಕ್ಕೋಡಿ: ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಸತೀಶ ಶುಗರ್‌  ಅವಾರ್ಡ್ಸ್‌ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಪಟ್ಟಣದ  ಕಿವಡ ಮೈದಾನದಲ್ಲಿ ನಾಳೆ ನಡೆಯುವ 2ನೇ ಸತೀಶ ಶುಗರ್‌ ಅವಾರ್ಡ್ಸ್‌ನ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ಪೂರ್ವ ಸಿದ್ದತೆ ಪರಿಶೀಲಿಸಿ ಮಾತನಾಡಿದ ಅವರು, ತಂದೆ, ಸಚಿವರಾದ ಸಚಿವ ಸತೀಶ್‌ ಜಾರಕಿಹೊಳಿ ಅವರ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದೇವೆ. ಚಿಕ್ಕೋಡಿಯಲ್ಲಿ 2ನೇ ಸತೀಶ ಶುಗರ್‌ ಅವಾರ್ಡ್ಸ್‌ ಕಾರ್ಯಕ್ರಮ ಇದಾಗಿದೆ. ಪ್ರಾಥಮಿಕ-ಪ್ರೌಢ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ತಾಲೂಕಿನ ಆಯ್ಕೆ ಪ್ರಕ್ರಿಯೆ ಮುಗದಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರಾದ ಸತೀಶ್‌ ಜಾರಕಿಹೊಳಿ, ಸಹೋದರ ರಾಹುಲ್ ಜಾರಕಿಹೊಳಿ‌ ಅವರು ಬರುತ್ತಾರೆ. ಚಿಕ್ಕೋಡಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುಂಚಿತವಾಗಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ವಿವಿಧ ಭಾಗಗಳಿಂದ ಆಗಮಿಸಿದ ಬಂದಂತಹ ಜನರ ಅಹವಾಲುಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಕಾಂಗ್ರೆಸ್ ಮುಖಂಡ ಪ್ರಭಾಕರ ಕೋರೆ, ರಾಮಕೃಷ್ಣ ಪಾನಗೂಡೆ, ಗಣೇಶ ಮೋಹಿತೆ, ಶಿವಾನಂದ ಮರ್ಯಾಯಿ, ಎಚ್.ಎಸ್. ನಸಲಾಪೂರೆ, ರಿಯಾಜ ಚೌಗಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!