ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ರಂಭಾಪುರಿ ಶ್ರೀಗಳು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಏನು ಸಂಬಂಧ, ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರಿಗೇನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಸತಿಶ್ ಜಾರಕಿಹೊಳಿ, ಸಿಎಂ ಬದಲಾವಣೆ ಅದು ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಸ್ವಾಮೀಜಿಗಳಿಗೆ ಏನು ಸಂಬಂಧ? ಸಮಾಜಕಟ್ಟೋದು, ಆಶಿರ್ವಾದ ಮಾಡೋದು ಶ್ರೀಗಳ ಕೆಲಸ. ಈ ರೀತಿ ಹೇಳಿಕೆಗಳನ್ನು ಸ್ವಾಮೀಜಿಗಳು ಕೊಡಬಾರದು ಎಂದಿದ್ದಾರೆ.
ಅವರ ಕಾರ್ಯವ್ಯಾಪ್ತಿ ಬೇರೆ, ನಮ್ಮ ಕಾರ್ಯವ್ಯಾಪ್ತಿ ಬೇರೆ. ಸಿಎಂ ಆಯ್ಕೆ ಮಾಡುವುದು ಶಾಸಕರು ಹಾಗೂ ಹೈಕಮಾಂಡ್. ಸಿಎಂ ಬದಲಾವಣೆ ಚರ್ಚೆಯಿಂದ ಅನವಶ್ಯಕ ಗೊಂದಲ ಸೃಷ್ಟಿಯಾಗುತ್ತಿದೆ.
ಕೆಲವರು ಬದಲಾವಣೆಯಾಗಬೇಕು ಅಂತಾರೆ, ಕೆಲವರು ಬೇಡ ಅಂತಾರೆ. ಈ ಬಗ್ಗೆ ಸಿಎಂ, ಡಿಸಿಎಂ ಅವರನ್ನೇ ಕೇಳಿ ಅವರೇ ಉತ್ತರ ಕೊಡುತ್ತಾರೆ.
ಈಗಾಗಲೇ ಉಸ್ತುವಾರಿಗಳು, ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದದರೆ. 5 ವರ್ಷಗಳ ಕಾಲ ನಮ್ಮ ಸರ್ಕಾರ ಇರುತ್ತದೆ. ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.




