Ad imageAd image

ಕುರುಬ ಸಮುದಾಯ STಗೆ ಸೇರ್ಪಡೆ ವಿಚಾರ : ಯಾರು ಆತಂಕಪಡುವ ಅಗತ್ಯವಿಲ್ಲ : ಸತೀಶ್ ಜಾರಕಿಹೊಳಿ 

Bharath Vaibhav
ಕುರುಬ ಸಮುದಾಯ STಗೆ ಸೇರ್ಪಡೆ ವಿಚಾರ : ಯಾರು ಆತಂಕಪಡುವ ಅಗತ್ಯವಿಲ್ಲ : ಸತೀಶ್ ಜಾರಕಿಹೊಳಿ 
satish jarkiholi
WhatsApp Group Join Now
Telegram Group Join Now

ಬೆಂಗಳೂರು : ಕುರುಬ ಸಮುದಾಯವನ್ನು ಎಸ್ ಟಿ ಗೆ ಸೇರಿಸುವಂತೆ ಶಿಫಾರಸು ವಿಚಾರವಾಗಿ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಕಳೆದ 20 ವರ್ಷಗಳಿಂದ ಸಾಕಷ್ಟು ಶಿಫಾರಸುಗಳು ಹೋಗಿವೆ.

ಬುಡಕಟ್ಟಿಗೆ ಸೇರಿದ ಅಂಶಗಳು ಇದ್ದರೆ ಎಸ್ಟಿಗೆ ಸೇರುತ್ತದೆ ಸರ್ಕಾರ ಶಿಫಾರಸು ಮಾಡಿದ ತಕ್ಷಣ ಆಗುತ್ತದೆ ಅಂತ ಏನಿಲ್ಲ.ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣವಾಗಿದ್ದು ಯಾರು ಸಹ ಆತಂಕ ಪಡುವ ಅಗತ್ಯವಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಎಸ್ ಟಿ ಗೆ ಹೊಸದಾಗಿ ಜಾತಿಗಳು ಸೇರ್ಪಡೆ ಆದರೆ ಎಸ್ ಟಿ ಮೀಸಲಾತಿ ಪ್ರಮಾಣ ಕೂಡ ಹೆಚ್ಚಳ ಆಗಬೇಕು. ಕೇಂದ್ರ ಸರ್ಕಾರ ಇದೆಲ್ಲವನ್ನು ಸುಮ್ಮನೆ ಮಾಡುವುದಿಲ್ಲ ಯಾವುದು ಸರಿಯಾಗಿದೆ ಅದನ್ನು ಮಾತ್ರ ಕೇಂದ್ರ ಸರ್ಕಾರ ಮಾಡುತ್ತದೆ.

ಇಂತಹ ಶಿಫಾರಸುಗಳು 20 ವರ್ಷಗಳಿಂದ ಬರುತ್ತಲೇ ಇವೆ. ಎಸ್ ಟಿ ಗೆ ಹೊಸ ಜಾತಿ ಸೇರಿಸುವುದು ಸುಲಭದ ಕೆಲಸ ಅಲ್ಲ. ಅನೇಕ ಶಿಫಾರಸುಗಳು ದೆಹಲಿ ಬೆಂಗಳೂರು ಅಂತ ಸುತ್ತುತ್ತಲೇ ಇವೆ ತಳವಾರ ಪರಿವಾರ ಎರಡನೇ ಮಾತ್ರ ಎಸ್ ಟಿ ಗೆ ಸೇರಿಸಿದ್ದಾರೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣವಾಗಿದೆ. ಯಾರು ಆತಂಕ ಪಡುವ  ಅಗತ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!