Ad imageAd image

ಡಿ.23-24 ರಂದು ಸತ್ಯಗಣಪತಿ ವಿಸರ್ಜನಾ ಮಹೋತ್ಸವ : ಮಲ್ಲಿಕಾರ್ಜುನ್

Bharath Vaibhav
ಡಿ.23-24 ರಂದು ಸತ್ಯಗಣಪತಿ ವಿಸರ್ಜನಾ ಮಹೋತ್ಸವ : ಮಲ್ಲಿಕಾರ್ಜುನ್
WhatsApp Group Join Now
Telegram Group Join Now

ತುರುವೇಕೆರೆ: ಪಟ್ಟಣದ ದೊಡ್ಡಗಣಪತಿ ಎಂದೇ ಹೆಸರಾಗಿರುವ ಶ್ರೀ ಸತ್ಯಗಣಪತಿ ಸ್ವಾಮಿಯವರ ವಿಸರ್ಜನಾ ಮಹೋತ್ಸವ ನೆರವೇರಲಿದೆ ಎಂದು ಶ್ರೀ ಸತ್ಯಗಣಪತಿ ಸೇವಾ ಸಮಾಜದ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್ (ರಾಜು) ತಿಳಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ 73 ವರ್ಷಗಳಿಂದ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಶ್ರೀ ಸತ್ಯಗಣಪತಿ ಸೇವಾ ಸಮಾಜ ನಡೆದುಕೊಂಡು ಬಂದಿದೆ. ಸಮಾಜದ ವತಿಯಿಂದ ತಾಲ್ಲೂಕಿನ ಬಹುದೊಡ್ಡ ಗಣಪತಿಯನ್ನು ಭಾದ್ರಪದ‌ ಮಾಸದ ಚತುರ್ಥಿಯಂದು ಪ್ರತಿಷ್ಠಾಪಿಸಿ ಅಂದಿನಿಂದ ಸತತ ಮೂರು ತಿಂಗಳ ಕಾಲ ಪ್ರತಿನಿತ್ಯ ಬೆಳಿಗ್ಗೆ, ಸಂಜೆ ಪೂಜೆ ನೆರವೇರಿಸಿ ತದನಂತರ ವಿಶೇಷ ಹೋಮ, ಹವನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆ ನಂತರ ಅದ್ದೂರಿಯಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಟ್ಟಣದ ಕೆರೆಯಲ್ಲಿ ಗಣಪತಿಯನ್ನು ವಿಸರ್ಜನೆ ನಡೆಸಲಾಗುತ್ತಿದೆ ಎಂದರು.

ಈ ವರ್ಷ 74 ನೇ ವರ್ಷದ ಸಂಭ್ರಮದಲ್ಲಿ ಜಾತ್ರೆ ಮತ್ತಯ ವಿಸರ್ಜನಾ ಮಹೋತ್ಸವ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಸಮಾಜಕ್ಕೆ ಹಾಗೂ ಗಣಪತಿ ಪ್ರತಿಷ್ಠಾಪನಾ ಮಹೋತ್ಸವಕ್ಕೆ 75 ವರ್ಷ ತುಂಬಲಿದ್ದು ಅದ್ದೂರಿಯಾಗಿ ಡೈಮೆಂಡ್ ಜ್ಯೂಬಿಲಿ ಕಾರ್ಯಕ್ರಮ ನಡೆಸುವ ಇಚ್ಛೆಯಿದೆ. ಇದೇ ಸಂದರ್ಭದಲ್ಲಿ ಸಮಾಜದಿಂದ ಸಮುದಾಯ ಭವನ ನಿರ್ಮಾಣ ಮಾಡುವ ಚಿಂತನೆಯನ್ನು ನಡೆಸಲಾಗಿದೆ ನಡೆಸಲಾಗಿದೆ ಎಂದರು.

ಡಿಸೆಂಬರ್ 8 ರಂದು ಸತ್ಯಗಣಪತಿ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ಸಹಯೋಗದಲ್ಲಿ ವಿಶೇಷ ಪೂಜೆ, ಗೋಗ್ರಾಸ, ಗೋಪೂಜೆ, ವಿವಿಧ ಹೋಮ ಹವನಗಳನ್ನು ಏರ್ಪಡಿಸಲಾಗಿದೆ. ಅಂದಿನಿಂದಲೇ ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಡಿಸೆಂಬರ್ 19 ರಂದು ಸಾರ್ವಜನಿಕರಿಂದ ಸಾರ್ವಜನಿಕರಿಗಾಗಿ ಅನ್ನದಾನ, ಡಿ.22 ರಂದು ಮಹಾಮಂಗಳಾರತಿ ನೆರವೇರಲಿದೆ. ಡಿ.23 ರಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ರಾತ್ರಿ ಪೂರ್ತಿ ಸ್ವಾಮಿಯ ಮೆರವಣಿಗೆ ನಡೆಸಿ ಡಿ.24 ರ ಸಂಜೆ ಕೆರೆಯಲ್ಲಿ ಸ್ವಾಮಿಯರ ವಿಸರ್ಜನಾ ಮಹೋತ್ಸವ ನಡೆಸಲಾಗುವುದು ಎಂದರು.

ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಬೇಕೆಂದು ಕೋರಿದರು.

 

 

ವರದಿ: ಗಿರೀಶ್ ಕೆ ಭಟ್, 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!