ಬೆಳಗಾವಿ : ಆಸ್ತಿ ವಿಷಯಕ್ಕೆ ನಡೆದ ಕಲಹವೊಂದು ವಿಕೋಪಕ್ಕೆ ತಿರುಗಿ ವಿಧವೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯ ಸವದತ್ತಿ ತಾಲ್ಲೂಕಿನ ಹರ್ಲಾಪುರದಲ್ಲಿ ನಡೆದಿದೆ.
ಮಹಿಳೆ ಹಲ್ಲೆಯಾಗುತ್ತಿದ್ದಂತೆಯೇ ಅಲ್ಲಿಂದ ಪ್ರಾಣವುಳಿಸಿಕೊಳ್ಳಲು ಅರೆಬಟ್ಟೆಯಲ್ಲಿಯೇ ಪೊಲೀಸ್ ಠಾಣೆಗೆ ಓಡಿ ಬಂದಿದ್ದು, ಪೊಲೀಸರು ಬಟ್ಟೆ ಕೊಟ್ಟು ಆಕೆಗೆ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
10 ಎಕರೆ ಜಮೀನಿನ ವಿಷಯಕ್ಕೆ ಎರಡು ಕುಟುಂಬಗಳ ನಡುವೆ ವ್ಯಾಜ್ಯ ನಡೆದಿತ್ತು. ಇದೇ ವಿಷಯಕ್ಕೆ ನಡೆದ ಜಗಳದಲ್ಲಿ 15 ಮಂದಿ ವಿಧವೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದರು. ಆಕೆಯನ್ನು ಮನ ಬಂದಂತೆ ಒದ್ದು ಥಳಿಸಿದ್ದಲ್ಲದೇ ಆಕೆಯ ಬಟ್ಟೆಯನ್ನು ಹರಿದುಹಾಕಿ ವಿವಸ್ತ್ರಗೊಳಿಸಿ ರಾಕ್ಷಸೀಯತೆ ಮೆರೆದಿದ್ದರು.
ಪೊಲೀಸರು ಮಹಿಳೆಯ ದೂರನ್ನಾಧರಿಸಿ ಹಲವರನ್ನು ವಶಕ್ಕೆ ಪಡಿದಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಗಳ ಪೈಕಿ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.