ಸವದತ್ತಿ: ಇಲ್ಲಿನ ಮಮದಾಪೂರ ಬಾಲಿಕೆಯರ ಪ್ರೌಢಶಾಲೆಯ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಕುರಿತು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ಈಚೆಗೆ ಜರುಗಿತು.
ಈ ಸಂರ‍್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನರ‍್ಧೇಶಕಿ ಲೀಲಾವತಿ ಹಿರೇಮಠ ಅವರು ಪ್ರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶೇ. ೧೦೦ ರಷ್ಟು ಸಾಧನೆ ಮಾಡಲು ಆದ್ಯತೆ ನೀಡಬೇಕೆಂದು ಹೇಳಿದರು.
ಶಿಕ್ಷಕರು ಡಿಸೆಂಬರ್ ಅಂತ್ಯಕ್ಕೆ ಕಡ್ಡಾಯವಾಗಿ ಪಠ್ಯಕ್ರಮ ಪರ‍್ಣಗೊಳಿಸಬೇಕೆಂದು ಸೂಚಿಸಿದರು. ಡಯಟ್ ಪ್ರಾಚರ‍್ಯ ಅಶೋಕ ಸಿಂದಗಿ ಮಾತನಾಡಿದರು. ಬಿಇಓ ಎ.ಎ. ಖಾಜಿ, ಅಕ್ಷರ ದಾಸೋಹ ಎ.ಡಿ. ಮೈತ್ರಾದೇವಿ ವಸ್ತçದ, ಸಲೀಂ ನದಾಫ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸಿ. ರಾಠೋಡ, ಮಾಧ್ಯಮಿಕ ಸಂಘದ ಅಧ್ಯಕ್ಷ ಬಸವರಾಜ ಆಲದಕಟ್ಟಿ, ಶ್ರೀಕಾಂತ ಯರಡ್ಡಿ, ಸುಧೀರ ವಾಘೇರಿ, ರ‍್ಜುನ ಕಾಮಣ್ಣವರ, ಬಿ.ವಿ. ಬಿಚಗಂಡಿ, ಆರ್. ಎಫ್. ಮಾಗಿ ಪಾಲ್ಗೊಂಡಿದ್ದರು.
ಸವದತ್ತಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಸುಧಾರಣೆ ಸಭೆ




