ಬೆಳಗಾವಿ : ಜಿಲ್ಲೆಯ ರಾಜಕಾರಣ ಮತ್ತೆ ರಂಗೇರಿದ್ದು, ರಮೇಶ್ ಜಾರಕಿಹೊಳಿ ಪಡೆಗೆ ಕುಟುಂಬಕ್ಕೆ ಮತ್ತೆ ಮುಖಭಂಗವಾಗಿದೆ.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ 13ರ ಪೈಕಿ ಎಲ್ಲಾ 13 ಅಭ್ಯರ್ಥಿಗಳು ಲಕ್ಷ್ಮಣ ಸವದಿ ಬಳಗದಿಂದ ಆರಿಸಿ ಬಂದ ಹಿನ್ನಲೆಯಲ್ಲಿ ಈ ಬಗ್ಗೆ ವ್ಯಾಪಕ ಟ್ರೊಲ್ ಗಳು ಹರಿದಾಡುತ್ತಿದೆ.
ಈ ಮಧ್ಯೆ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಲಕ್ಷ್ಮಣ ಸವದಿ ಸ್ವತಃ ಈ ರೀತಿಯ ಟ್ರೊಲ್ ಒಂದನ್ನು ತಮ್ಮ ಸ್ಟೇಟಸ್ ಗೆ ಹಾಕಿ ಜಾರಕಿಹೊಳಿ ಬ್ರದರ್ಸ್ ಕಾಲೆಳೆದಿದ್ದಾರೆ.
ಈ ಸ್ಟೇಟಸ್ ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಗಜಾನನ ಮಂಗಸೂಳಿ ಇವರ ಫೋಟೋ ಹಾಗೂ ವಿಡಿಯೋಗಳನ್ನು ಟ್ರೊಲ್ ಮಾಡಲಾಗಿದೆ.
ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿಲಕ್ಷ್ಮಣ ಸವದಿ ಮತ್ತು ತಂಡ ಗೆದ್ದು ಬೀಗಿದ್ದು,ಸವದಿ ತಂಡದ 13 ಅಭ್ಯರ್ಥಿಗಳೂ ಜಯ ಸಾಧಿಸಿದ್ದಾರೆ.
ಈ ಚುನಾವಣೆಯಲ್ಲಿ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ತಂಡ ಸೋಲು ಕಂಡಿದ್ದು, ಅಥಣಿಯಲ್ಲಿ ಸವದಿ ಬೆಂಬಲಿಗರ ವಿಜಯೋತ್ಸವ ಇನ್ನೂ ನಿಂತಿಲ್ಲ. ಸವದಿ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲ್ ಹಚ್ಚಿ ಸಂಭ್ರಮಾಚರಣೆ ಮಾಡಿದ್ದು, ಈ ಬೆಳವಣಿಗೆ ರಮೇಶ್ ಜಾರಕಿಹೋಳಿ ಪಡೆಗೆ ಭಾರೀ ಹಿನ್ನಡೆ ಉಂಟುಮಾಡಿದೆ.




