ಮೊಳಕಾಲ್ಮೂರು : ಪಟ್ಟಣದ ಶಾದಿ ಮಹಲ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಪಂಚಾಯತ್,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ತಾಲೂಕು ಪಂಚಾಯಿತಿ,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಮಾತೆ ಸಾವಿತ್ರಿ ಬಾ ಫುಲೆ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶೈಕ್ಷಣಿಕ ಕಾರ್ಯಗಾರ ಹಾಗೂ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ದೇಶದಲ್ಲಿ ಶೋಷಿತ ಸಮುದಾಯಗಳಿಗೆ ಅಕ್ಷರದ ಮೂಲಕ ಅರಿವನ್ನು ಕಟ್ಟಿಕೊಟ್ಟ ಕೀರ್ತಿ ಸಾವಿತ್ರಿ ಬಾಪುಲೆ ದಂಪತಿಗಳಿಗೆ ಸಲ್ಲುತ್ತದೆ.ಅನೇಕ ಸವಾಲು ಮತ್ತು ಅಡೆತಡೆಗಳ ನಡುವೆ ತಳ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ಕಟ್ಟಿಸಿ ಅಕ್ಷರ ಕಲಿಸಿ ಸಮಾಜದಲ್ಲಿ ಸಮಾನತೆ ಕಲ್ಪಿಸಿದ್ದರು.ಅವರ ಆಶಯ ಮತ್ತು ಆದರ್ಶಗಳು ಇಂದಿನ ಶಿಕ್ಷಕರಿಗೆ ದಾರಿ ದೀಪವಾಗಬೇಕು ಎಂದರು.
ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. 5 ಕೋಟಿ ವೆಚ್ಚದಲ್ಲಿ 40 ಶಾಲೆಗಳ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಕ್ಕೆ ಸೂಚಿಸಿದ್ದೇನೆ.ಹೆಚ್ಚಿನ ಅನುದಾನ ಶೈಕ್ಷಣಿಕ ನೀಡಿದ್ದೇನೆ.ಶಿಕ್ಷಕರ ಮಗನಾಗಿರುವ ನನಗೆ ಶಿಕ್ಷಕರ ಸಮಸ್ಯೆಗಳನ್ನು ಅರಿತಿದ್ದೇನೆ.ಶಿಕ್ಷಕರು ಇರುವ ಸೌಲಭ್ಯಗಳಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಿ ತಾಲೂಕನ್ನು ಶೈಕ್ಷಣಿಕವಾಗಿ ಇನ್ನಷ್ಟು ಅಭಿವೃದ್ಧಿ ಗೊಳಿಸಬೇಕು ಎಂದ ಅವರು ಗುರು ಭವನದ ದುರಸ್ತಿಗೆ 10 ಲಕ್ಷ ಅನುದಾನ ನೀಡುವ ಭರವಸೆ ವ್ಯಕ್ತ ಪಡಿಸಿದರು.
ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಮಂಜುನಾಥ ಮಾತನಾಡಿ ಸ್ವತಂತ್ರ ಪೂರ್ವದಲ್ಲಿ ಮಹಿಳೆಯರ ಶಿಕ್ಷಣ ಇಲ್ಲದ ಸಂದರ್ಭದಲ್ಲಿ ಸಾವಿತ್ರಿ ಬಾ ಪುಲೇ ಮಹಿಳೆಯರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಿದರು.ವಿರೋಧದ ನಡುವೆಯೂ ಶೋಷಿತ ಸಮುದಾಯಕ್ಕೆ ಅಕ್ಷರ ನೀಡಿದ ಮಹಾ ಮಾತೆಯಾಗಿದ್ದಾರೆ.ಸುಭದ್ರ ಬದುಕು ಕಟ್ಟಿಕೊಳ್ಳಲು ಶಿಕ್ಷಕರು ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಬೇಕು.ಹಿಂದುಳಿದ ತಾಲೂಕಿನ ಅಭಿವೃದ್ಧಿಯಲ್ಲಿ ಶಿಕ್ಷಕರು ಸೇವೆಯಲ್ಲಿ ಸೇವಾ ನಿಷ್ಠೆ ಅಗತ್ಯವಾಗಬೇಕು.ಸಾವಿತ್ರಿ ಬಾ ಫುಲೆ ದಂಪತಿಗಳ ಆದರ್ಶಗಳನ್ನು ಬದುಕಲ್ಲಿ ಅಳವಡಿಸಿಕೊಂಡು ಅಕ್ಷರ ಕಲಿಸಲು ಮುಂದಾಗಬೇಕು ಎಂದರು.
ಸಂದರ್ಭದಲ್ಲಿಸಂಘದ ರಾಜ್ಯ ಉಪಾಧ್ಯಕ್ಷ ಮಾರುತೇಶ್ ,ಸಂಘದ ಜಿಲ್ಲಾಧ್ಯಕ್ಷ ಜಿ.ಟಿ.ಮಹಾಂತೇಶ್,ತಾಲೂಕು ಪಂಚಾಯಿತಿ ಇ. ಒ ಹನುಮಂತಪ್ಪ,ಕ್ಷೇತ್ರ ಶಿಕ್ಷಣಾಧಿಕಾರಿ ನಿರ್ಮಲಾದೇವಿ,ಕ್ಷೇತ್ರ ಸಮನ್ವಾಧಿಕಾರಿ ತಿಪ್ಪೇಸ್ವಾಮಿ ,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹನುಮಂತಪ್ಪ,ಸಂಘದ ತಾಲೂಕು ಅಧ್ಯಕ್ಷೆ ಮಮತ,ಚಿತ್ರದುರ್ಗ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆಂಚಪ್ಪ,ಜಿಲ್ಲಾ ಪ್ರದಾನ ಕಾರ್ಯದರ್ಶಿ ಹನುಮಂತಪ್ಪ,ಚಳ್ಳಕೆರೆ ತಾಲೂಕು ಅಧ್ಯಕ್ಷೆ ಸಣ್ಣ ಸೂರಮ್ಮ,ಚಿತ್ರದುರ್ಗ ತಾಲೂಕು ಕಾರ್ಯದರ್ಶಿ ರೂಪ ಸಿ.ಎನ್, ಚಳ್ಳಕೆರೆ ತಾಲೂಕು ಪ್ರಧಾನ ಕಾರ್ಯದರ್ಶಿ ಈ ಹನುಮಂತ ರಾಯ ಮಾಜಿ ನೌಕರ ಸಂಘದ ಸಹಕಾರ್ಯದರ್ಶಿ ಮಹಮ್ಮದ್ ತಾಜೀರ್ ಭಾಷಾ ಪಟ್ಟಣ ಪಂಚಾಯಿತಿ ಸದಸ್ಯ ಖಾದರ್, ಜಿಯಾವುಲ್ಲಾ, ನೌಕರ ಸಂಘದ ಕುಮಾರ್,ಕರಿಬಸಪ್ಪ,ಮುಕ್ಕಣ್ಣ,ನಾಗಭೂಷಣ ರೆಡ್ಡಿ,ರಾಜಣ್ಣ,ಪ್ರದಾನ ಕಾರ್ಯದರ್ಶಿ ಪ್ರದೀಪ್ ಕುಮಾರ್,ಗೌರವ ಅಧ್ಯಕ್ಷ ಆರ್.ಅಶೋಕ,ಜಿಲ್ಲಾ ಸಹ ಕಾರ್ಯದರ್ಶಿ ಲತಾ,ಜಿ.ಎನ್.ತಿಪ್ಪೇಸ್ವಾಮಿ,ಎಚ್.ಎಲ್ ಸುಜಾತ,ಟಿ.ಎಂ.ಅಶೋಕ,ಇದ್ದರು.
ಸಂದರ್ಬದಲ್ಲಿ ವಿವಿಧ ಶಿಕ್ಷಕರಿಗೆ ಅಕ್ಷರದವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವರದಿ : ಪಿಎಂ ಗಂಗಾಧರ




