ಐನಾಪುರ : ಪತಿ ಜ್ಯೋತಿಬಾ ಫುಲೆ ಅವರಿಂದಲೇ ಜ್ಞಾನವನ್ನು ಪಡೆದುಕೊಂಡು ಬಡವರ, ಹಿಂದುಳಿದವರ, ಶೋಷಿತ ವರ್ಗದವರ ಹಾಗೂ ಮಹಿಳೆಯರಿಗಾಗಿ ಅಸ್ಪೃಶ್ಯರ ಕೇರಿಗಳಲ್ಲಿ ಹೋಗಿ ಅಕ್ಷರ ಜ್ಞಾನವನ್ನು ನೀಡಿ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎನಿಸಿಕೊಂಡು ಜ್ಞಾನ ದಾಸೋಹದ ಅಧಿನಾಯಕಿ ಸಾವಿತ್ರಿಬಾಯಿ ಫುಲೆ ಎಂದು ಮೋಳೆ ಸಿದ್ದೇಶ್ವರ ಹೈಸ್ಕೂಲ ಶಿಕ್ಷಕ ಎಲ್ ಟಿ ಬಬಲಿ ಹೇಳಿದರು.

ಅವರು ರವಿವಾರ ದಿನಾಂಕ 4 ರಂದು ತಾಲ್ಲೂಕಿನ ಐನಾಪುರ ಪಟ್ಟಣದ ಮಾಳಿ ಸಮಾಜದ ಬಸವ ಜ್ಯೋತಿ ಸಭಾಭವನದಲ್ಲಿ ಬಸವ ಜ್ಯೋತಿ ಪ್ರತಿಷ್ಠಾನದವರು ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ 195 ನೇ ಜಯಂತೋತ್ಸವ ನಿಮಿತ್ಯ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಣ ಇದ್ದವರು, ಅಂತಸ್ತು ಇದ್ದವರು, ಎಷ್ಟೇ ಉನ್ನತ ಅಧಿಕಾರದಲ್ಲಿ ಇದ್ದವರು ದೊಡ್ಡವರಲ್ಲ, ತಮ್ಮ ಜೀವಮಾನವನ್ನು ಗಂಧದಂತೆ ಸವೆಸಿ ಸಮಾಜಕ್ಕಾಗಿ ಸಮರ್ಪಣೆ ಮಾಡಿ ಪುಲೆ ದಂಪತಿಗಳು ದೇಶಕ್ಕೆ, ಜಗತ್ತಿಗೆ ದೊಡ್ಡವರಾದರು ,ಆಗಿನ ಸಮಾಜದಲ್ಲಿ ಸಾವಿತ್ರಿಬಾಯಿ ಪುಲೆ ಅವರಿಗೆ ಮೇಲ್ವರ್ಗದವರಿಂದ ಆದ ಅವಮಾನ, ಮಾನಸಿಕ ಹಿಂಸೆ, ಕಿರುಕುಳ ಸಾಕಷ್ಟು ಇದ್ದರೂ ಕೂಡ ಅದನ್ನು ಲೆಕ್ಕಿಸದೆ ಜ್ಞಾನಾರ್ಜನೆಯನ್ನು ನೀಡಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತಂದರು.
ಸಾವಿತ್ರಿಬಾಯಿ ಫುಲೆಯವರು ಎಂದೂ ಆರದ ಜ್ಞಾನಜ್ಯೋತಿಯನ್ನು ಬೆಳಗಿದರಿಂದ ಇಂದು ದೇಶದಲ್ಲಿ ಸಾಕಷ್ಟು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಯನ್ನು ಸಲ್ಲಿಸಲು ಅನುಕೂಲವಾಯಿತು. ಆಗಿನ ಜನರಲ್ಲಿ ಮೂಢನಂಬಿಕೆ, ಕಂದಾಚಾರ ಹಾಗೂ ಮೌಡ್ಯಗಳನ್ನು ಹೋಗಲಾಡಿಸಲು ಪುಲೆ ದಂಪತಿಗಳು ತಮ್ಮ ಜೀವನವನ್ನೇ ಸಮಾಜಕ್ಕಾಗಿ ಮೀಸಲಿಟ್ಟರು. ದೇಶದಲ್ಲಿ ಮಹಿಳೆಯರಿಗಾಗಿ ಪ್ರೌಢಶಾಲೆ ಹಾಗೂ ವಸತಿ ಶಾಲೆಗಳನ್ನು ಮೊಟ್ಟಮೊದಲಿಗೆ ಆರಂಭಿಸಿದ ಕೀರ್ತಿ ಪುಲೆಯವರಿಗೆ ಸಲ್ಲುತ್ತದೆ ಎಂದರು.
ಐನಾಪುರ ಗುರುದೇವ ಆಶ್ರಮದ ಬಸವೇಶ್ವರ ಸ್ವಾಮಿಜಿ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಅನ್ನೋ ಹಾಗೆ ತೊಟ್ಟಿಲ ತೂಗುವ ಕೈ ಜಗತ್ತನ್ನೇ ಆಳಬಹುದು, ಅದರಂತೆ ಸಾವಿತ್ರಿಬಾಯಿ ಫುಲೆ ಅವರು ಆಗಿನ ಕಾಲದಲ್ಲಿ ಮಹಿಳೆಯರು ಶೋಷಿತ ವರ್ಗದವರು ಶಿಕ್ಷಣದಿಂದ ವಂಚಿತರಾಗಿದ್ದರು ಆಗ ತಮ್ಮ ಜೀವಮಾನವನ್ನು ಸವಿಸಿ ಶಿಕ್ಷಣವನ್ನು ನೀಡಿದರು. ತಾವು ಕೂಡ ಮಕ್ಕಳಿಗೆ ತಂದೆ ತಾಯಿಗಳು ಸಂಸ್ಕಾರಯುತ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಮಾಳಿ ಸಮಾಜದ ಅಧ್ಯಕ್ಷ ಸುರೇಶ್ ಕಾಗಲಿ ಮಾತನಾಡಿದರು, ರಾಮು ಕಾಗಲಿ ಸಮಾರಂಭದ ಅಧ್ಯಕ್ಷತೆಯ ವಹಿಸಿದ್ದರು.
ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಂಜನಾ ಶ್ರೀಶೈಲ ನಾಂದನಿಕರ್, ನೀಲಾಂಬಿಕಾ ಶಿವಾನಂದ ಬೆಳಕೂಡ, ಸುಪ್ರಿಯಾ ಅಣ್ಣಾಸಾಬ್ ಕಾಗಲಿ, ಅಭಿಷೇಕ್ ಗುರುಪಾದ ತೊಡಕರ್ ಇವರನ್ನು ಸತ್ಕರಿಸಲಾಯಿತು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ವೇಳೆ ಕೇದಾರಿ ನಾಂದನಿಕರ, ಮುರಿಗೆಪ್ಪ ಬೆಳಕೂಡ, ಶ್ರೀಶೈಲ ನಾಂದನಿಕರ, ಮಾರುತಿ ಜೀರಗಾಳ, ಶಿವಾನಂದ ಬೆಳಕೂಡ, ಅಪ್ಪಾಸಾಬ ಕಾಗಲಿ, ನಿತಿನ ತೊಡಕರ, ಶಿವಾನಂದ ಮಾಲಗಾರ, ಹನುಮಂತ ಕಾಗಲಿ, ಪ್ರಶಾಂತ ತೊಡಕರ್, ಬಸವರಾಜ ಜೀರಗಾಳ, ವಿಠ್ಠಲ ಕಾಗಲಿ, ಉಮೇಶ ಕಾಗಲಿ,ರಾಜು ಮಾಳಿ, ಮಹಾದೇವ ಜೀರಗಾಳ, ರವಿ ಮಾಳಿ, ರಾಮಲಿಂಗ ಕೋರೆ, ಜ್ಯೋತಿ ಜೀರಗಾಳೆ, ಸೇರಿದಂತೆ ಇತರರು ಇದ್ದರು.
ಸಂತೋಷ ಬೆಳಕೂಡ ನಿರೂಪಿಸಿದರು, ಮಂಜುನಾಥ್ ಕಾಗಲಿ ಪರಿಚಯಿಸಿದರು, ಅನ್ನಪೂರ್ಣ ಕಾಗಲಿ ಸ್ವಾಗತಿಸಿದರು, ವೈಷ್ಣವಿ ಕಾಗಲಿ ವಂದಿಸಿದರು.
ವರದಿ : ಮುರಗೇಶ ಗಸ್ತಿ




