ಬೌದ್ಧಿಜ್ಞಾನವನ್ನು ಎಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಿಕ್ಕುಆನಂದ ಪ್ರಧಾನ ಕಾರ್ಯದರ್ಶಿಗಳು ಮಹಾಬೋಧಿ ಸೊಸೈಟಿ ಬೆಂಗಳೂರು ಇವರು ತಿಳಿಸಿದರು.
ಪಟ್ಟಣದ ವರವಲಯದಲ್ಲಿರುವ ನಮ್ಮ ಆಶ್ರಮ ಮಹಾವನ ಬೋಧಿಕಾ ವಿಕಲಚೇತನ ಮಕ್ಕಳ ವಸತಿಯುಕ್ತ ಶಾಲೆಯಲ್ಲಿ ಶುಕ್ರವಾರ ಬುದ್ಧನ ವಿಚಾರವಾಗಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ನಮ್ಮ ಜೀವನದಲ್ಲಿ ಬುದ್ಧನ ಪ್ರತಿಯೊಂದು ಅಂಶಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕಿದೆ ಈ ಭಾಗದಲ್ಲಿ ಹೆಚ್ಚು ಪ್ರಚಲಿತ ವಾಗದಿದ್ದರೂ ಕೂಡ ನಮ್ಮ ಕಡೆ ಬುದ್ಧನು ಆಶೀರ್ವಚನವನ್ನು ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.

ಅದೇ ರೀತಿ ಪರಮಪೂಜ್ಯ ಕಸಪ್ಪ ಮಹಥರ ಮಾತನಾಡಿ ಬೌದ್ಧನ ಅನೇಕ ಅಂಶಗಳು ಪ್ರಪಂಚಕ್ಕೆ ತಿಳಿದಿದೆ
ಬುದ್ಧ ಧರ್ಮವನ್ನು ಎಲ್ಲರೂ ಒಪ್ಪಿದ್ದಾರೆ ಕೆಲವರು ಅವರವರ ಆಚರಣೆಗೆ ಬಿಟ್ಟ ವಿಚಾರ ಈ ಭಾಗದಲ್ಲಿ ಇಂತಹ ಆಶ್ರಮ ಮಾಡಿರುವ ಶ್ರೀನಿವಾಸ್ ಮೂರ್ತಿಯವರಿಗೆ ನಮ್ಮ ಕಡೆಯಿಂದ ಸಂಪೂರ್ಣವಾಗಿ ಬೆಂಬಲ ನೀಡುತ್ತೇವೆ. ನಮ್ಮ ಆಶ್ರಮದ ಕಡೆಯಿಂದ ವಿಕಲಚೇತನ ಮಕ್ಕಳಿಗೆ ಏನು ಸಹಾಯ ಬೇಕು ನಾವು ಮಾಡಲು ಸಿದ್ಧರಿದ್ದೇವೆ ಎಂದರು
ಅದೇ ರೀತಿ ನಮ್ಮ ಆಶ್ರಮದ ಅಧ್ಯಕ್ಷರಾದ ಮೊಳಕಾಲ್ಮೂರು ಶ್ರೀನಿವಾಸ್ ಮೂರ್ತಿ ಮಾತನಾಡಿ ಈ ಭಾಗದಲ್ಲಿ ಬುದ್ಧನ ಆಶೀರ್ವಚನ ನೀಡುವ ಮಹಾ ಗುರುಗಳು ಈ ಭಾಗದಲ್ಲಿ ತುಂಬಾ ಕಡಿಮೆ, ನಾವು ನಮ್ಮ ಜೀವನದಲ್ಲಿ ಯಾವ ರೀತಿ ಅಂತಹ ಹಂತವಾಗಿ ಮೇಲೆ ಬರಬೇಕು ಎಂದು ತಿಳಿಸಿಕೊಡಲಿದ್ದಾರೆ ಇಂತಹ ಗುರುಗಳು ಈ ಭಾಗಕ್ಕೆ ಬಂದಿರುವುದು ಇದೇ ಮೊದಲು ಅಂತ ಅನಿಸುತ್ತದೆ ಇವರ ಆಶೀರ್ವಚವನ್ನು ಕೇಳಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಮ್ಮ ಆಶ್ರಮದ ಧರ್ಮದರ್ಶಿಗಳು ಟಿಆರ್ ಶ್ರೀಧರ್ ಜೆಜೆ ಜನಾರ್ದನ ಯದು ಪತಿ ಪ್ರಾಂಶುಪಾಲರು ಕೆ ನಾಗರತ್ನ ಸಿಬ್ಬಂದಿ ಮತ್ತು ಮಕ್ಕಳು ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಪಿಎಂ ಗಂಗಾಧರ




