ಗೋಕಾಕ: ದೈಹಿಕವಾಗಿ ಆರೋಗ್ಯವಾಗಿರಬೇಕು,ಸದೃಡವಾದ ಶರೀರದಲ್ಲಿ ಸದೃಡವಾದ ಮನಸ್ಸು ಇರುತ್ತದೆ, ಮನಸ್ಸು ಯಾವಾಗ ಸದೃಡವಾಗುತ್ತದೆಯೋ ಆವಾಗ ಮಾತ್ರ ಮನಸ್ಸು ಕಲಿಕೆಗೆ ಪೂರಕವಾಗುತ್ತದೆ .
ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವಿಕ್ಷಕರಾದ ಎಲ್,ಕೆ, ತೊರಣಗಟ್ಟಿ ಇವರು ಆಚಾರ್ಯ ಶ್ರೀ ಶಾಂತಿಸಾಗರ ತಪೋವನ ಶಿಕ್ಷಣ ಸಂಸ್ಥೆಯಲ್ಲಿ 11 ನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ದಿನದಂದು ಸಸಿಗೆ ನೀರು ಉಣಿಸಿ ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ತುಂಬಾ ಪ್ರಯೋಜನಕಾರಿ. ಇದು ದೇಹವನ್ನು ರೋಗ ಮುಕ್ತವಾಗಿರಿಸುವುದಲ್ಲದೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.ಯೋಗದ ವಿಷಯದಲ್ಲಿ ಭಾರತವು ಒಂದು ರೀತಿಯಲ್ಲಿ ವಿಶ್ವ ಗುರುವಾಗಿದೆ. ಭಾರತವು ಯೋಗದ ಮೂಲಕ ಸಾಂಸ್ಕೃತಿಕ ಏಕತೆಯನ್ನು ಉತ್ತೇಜಿಸಿದೆ.ಅದಕ್ಕಾಗಿ ದಿನಾಲು ಎಲ್ಲರೂ ಯೊಗ ಮಾಡಬೇಕೆಂದು ಹೇಳಿದರು.

ನಂತರ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸರಕಾರಿ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿಗಳು ತಾಡಾಸನ, ಅಲುನೊಮ,ಪ್ರಾಣಾಯಮ,ನಟರಾಜಾಸನ, ಸೂರ್ಯ ನಮಸ್ಕಾರಗಳಂತಹ ಯೋಗಗಳ ಹಲವಾರು ಆಸನಗಳನ್ನು ಅತಿ ಉತ್ಸಾಹದಿಂದ ಮಾಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಸುಧಾ ಪೂಜೇರಿ ಇವರು ಯೋಗದ ವಿದ್ಯಾರ್ಥಿಗಳಿಗೆ ಮಹತ್ವನ್ನು ತಿಳಿಸಿದರು,ಸರಕಾರಿ ಶಾಲೆಯ ದೈಹಿಕ ಶಿಕ್ಷಕಿ ಬೋರ್ಜಿಯವರು ಮಕ್ಕಳಿಂದ ಯೋಗ ಪ್ರತಿಜ್ಞೆ ಮಾಡಿಸಿ ಆಸನಗಳ ಉಪಯೋಗ ತಿಳಿಸುತ್ತಾ ಆಸನಗಳನ್ನು ಹೇಳಿ ಮಾಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಅದ್ಯಕ್ಷರಾದ ಜಿನ್ನಪ್ಪ ಚೌಗಲಾ, ಶಿಕ್ಷಕಿಯರಾದ ಭಾರತಿ ಮಸೂತಿ,ನೇತ್ರಾವತಿ ಮಾಳಗಿ,ಮಹೇಶ್ವರಿ ಸಿದ್ದನ್ನವರ,ಸೇರಿದಂತೆ ಇನ್ನೂಳಿದ ಶಿಕ್ಷಕಿಯರು ವಿದ್ಯಾರ್ಥಿಗಳ ಜೊತೆ ಯೋಗದ ಆಸನಗಳನ್ನು ಉತ್ಸಾಹದಿಂದ ಮಾಡಿದರು.
ವರದಿ:ಮನೋಹರ ಮೇಗೇರಿ




