Ad imageAd image
- Advertisement -  - Advertisement -  - Advertisement - 

ಬಸ್ಸಿಗಾಗಿ ಪರದಾಡುತ್ತಿರುವ ಶಾಲಾ ಮಕ್ಕಳು.

Bharath Vaibhav
ಬಸ್ಸಿಗಾಗಿ ಪರದಾಡುತ್ತಿರುವ ಶಾಲಾ ಮಕ್ಕಳು.
WhatsApp Group Join Now
Telegram Group Join Now

ಬಾದಾಮಿ :- ಸುಳ್ಳದ ಗ್ರಾಮದ ವಿದ್ಯಾರ್ಥಿಗಳು ದಿನ ನಿತ್ಯ ಶಾಲೆಗೆ ಹೋಗಲು ಬಸ್ಸಿಗಾಗಿ ಪರದಾಡುತ್ತಿದ್ದಾರೆ.ಸಮಸ್ಯೆ ಕುರಿತು ವಿದ್ಯಾರ್ಥಿಗಳು ದಿಡೀರ್ ಆಗಿ ಬಾದಾಮಿ ಕೆರೂರ್, ಬಾದಾಮಿ ಕೊಣ್ಣೂರ , ಈ ರೀತಿ ಮೂರು ಬಸ್ ನಿಲ್ಲಿಸಿ ಪ್ರತಿಭಟನೆ ಮಾಡಲು ಮುಂದಾದರು.ಸ್ಥಳಕ್ಕೆ ಡಿಪೋ ಅಸಿಸ್ಟಂಟ ಟ್ರಾಫಿಕ್ ಇನ್ಸ್ಪೆಕ್ಟರ್ ಎಸ್, ಟಿ, ಚವಾಣ್ ಅವರು ಆಗಮಿಸಿ ಸಮಸ್ಯೆ ಪರಿಹಾರ ನೀಡಲು ಮುಂದಾಗಿದ್ದಾರೆ, ನಂತರ ಯಾವುದೇ ರೀತಿ ಸಮಸ್ಯೆ ಆಗದ ರೀತಿ ನಾವು ಕರ್ತವ್ಯ ಮಾಡಲು ಮುಂದಾಗುತ್ತೇವೆ ನಮ್ಮ ಸಿಬ್ಬಂದಿಗಳಿಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.ಶಾಲೆಗೆ ಹೋಗುವದು ತಡವಾಗುತ್ತದೆ,ನಾವು ದಿನ ನಿತ್ಯ ಇದೆ ಪರಿಸ್ಥಿತಿ  ಅನುಭವಿಸುತ್ತಿದ್ದೇವೆ.

ವ್ಯಾಪಾರಸ್ಥರು ತಮ್ಮ ಮಾರಾಟದ ಸಾಮಾನುಗಳನ್ನು ಬಸ್ ಸಿಟ್ ಮೇಲೆ ಇಡುತ್ತಾರೆ ನಮಗೆ ಕುಡಲು ಅವಕಾಶ ಮಾಡಿ ಕೊಡುವದಿಲ್ಲಾ,ಇದಕ್ಕೆ ನಮಗೆ ಸಮಯಕ್ಕೆ ಸರಿಯಾಗಿ ಅನುಕೂಲ ಮಾಡಿ ಕೊಡಬೇಕು ಎಂದು ಶಾಲಾ ಮಕ್ಕಳು,ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಬಸ್ ಸಮಸ್ಯೆ ಕುರಿತು ಊರಿನ ಗ್ರಾಮಸ್ಥರು ತುಳಸಪ್ಪ ಫಾತ್ರೊಟ್ಟಿ ಮಾನವ ಹಕ್ಕು ರಕ್ಷಣೆ ಬ್ರಷ್ಟಾಚಾರ ನಿರ್ಮೂಲನೆ ಸಮಿತಿ ಜಿಲ್ಲಾ ಅಧ್ಯಕ್ಷರು , ಮಂಜುನಾಥ್ ಕುಂಬಾರ್, ಮಲ್ಲಪ್ಪ ಅವಾರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕಿತ್ತಲಿ. ಸಾಬಣ್ಣ ಬಂದಿವಡ್ಡರ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಂಘಟೀತರು ರುದ್ರೇಶ್ ಹುನಸಿಗಿಡದ,ಊರಿನ ಮುಖಂಡರು,ಇದ್ದರೂ.

ವರದಿ:-ಎಸ್, ಎಸ್, ಕವಲಾಪುರಿ 

WhatsApp Group Join Now
Telegram Group Join Now
Share This Article
error: Content is protected !!