Ad imageAd image

ಸೊಳ್ಳೆಗಳ ಆವಾಸ ಸ್ಥಾನವಾದ ಶಾಲೆ: ಗಬ್ಬು ನಾರುತ್ತಿರುವ ಗಟಾರುಗಳು

Bharath Vaibhav
ಸೊಳ್ಳೆಗಳ ಆವಾಸ ಸ್ಥಾನವಾದ ಶಾಲೆ: ಗಬ್ಬು ನಾರುತ್ತಿರುವ ಗಟಾರುಗಳು
WhatsApp Group Join Now
Telegram Group Join Now

ಸವಣೂರು :- ಪಟ್ಟಣದ ಡಾ..ಬಿ.ಆರ್.ಅಂಬೇಡ್ಕರ್ ನಗರದ ಸರಕಾರಿ ಪ್ರಾಥಮಿಕ ಶಾಲೆ ನಂ 3 ರ ಶಾಲೆಯ ಹತ್ತಿರವಿರುವಂತಹ ಗಟ್ಟಾರಗಳು ತುಂಬಿ ಕೊಳೆತು ನಾರುತ್ತಿವೆ.ಬೆಳಗಾದರೆ ಸಾಕು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಓಡಾಡಲು ಸಹ ಬಹಳ ತೊಂದರೆಯಾಗುತ್ತಿದ್ದು, ಮಕ್ಕಳು ಕೆಸರು ತುಂಬಿದ ಗಟಾರುಗಳಿಗೆ ಬಿಳುತ್ತಿದ್ದಾರೆ.

ಕೆಟ್ಟವಾಸನೆ ಬಿರುತ್ತಿದ್ದರು ಸಹ ಕ್ಯಾರೆ ಎನ್ನದ ಅಧಿಕಾರಿಗಳು ಮಕ್ಕಳಿಗೆ ಊಟ ಮಾಡಲು ಸಹ ಆಗದೇ ಇರುವಂತಹ ದುಸ್ಥಿತಿ ಎದುರಾಗಿದೆ.ಸೊಳ್ಳೆಗಳ ಕಡಿತದಿಂದ ಮಕ್ಕಳು ಸಹ ಅನಾರೋಗ್ಯದಿಂದ ಬಳಳುತ್ತಿದ್ದಾರೆ.ಡೆಂಗ್ಯೂ ಪ್ರಕರಣ ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ ಇದರ ಅರಿವು ಇಲ್ಲದೆ ಪುರಸಭೆ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿರುವುದು ನಿಜಕ್ಕೂ ನಾಚಿಕೆ ಗೆಡು ಸಂಗತಿಯಾಗಿದೆ.

ಆದರೂ ಸಹ ಶಾಲೆಯ ಮುಂದೆ ಇರುವಂತಹ ಗಟಾರುಗಳನ್ನು ಸರಿಪಡಿಸುವ ನೆಪದಲ್ಲಿ ಪುರಸಭೆಯವರು ಗಟಾರವನ್ನು ಇನ್ನೂ ಸಹ ಅದೋ ಗತಿಗೆ ತಂದೊಡ್ಡಿದ್ದಾರೆ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಸರಿ ಪಡಿಸುತ್ತಾರೋ ಇಲ್ವೋ ಎಂದು ಕಾದು ನೋಡಬೇಕಿದೆ.

ವರದಿ:-ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!