ಇಳಕಲ್ :ನಗರದ ಮೌಲಾನಾ ಆಜಾದ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಇಂದು ವಿಜ್ಞಾನ, ಕಲೆ ವಸ್ತು ಪ್ರದರ್ಶನ ಅತ್ಯಂತ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಇಳಕಲ್ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಧಾರಾಣಿ ಸಂಗಮ ಮಕ್ಕಳು ರಚಿಸಿದ ಚಂದ್ರಯಾನ ೩ ಪ್ರಾತ್ಯಕ್ಷಿಕೆ ಯನ್ನು ಉಡಾವಣೆ ಗೊಳಿಸಿ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಇಂತಹ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಈ ಶಾಲೆಯ ಶಿಕ್ಷಕರು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ ವಿ ಎಮ್ ಬಿ ಬಿ ಎ ಕಾಲೇಜಿನ ಉಪನ್ಯಾಸಕ ಬಸವರಾಜ ಕಾಳಗಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಭಾಗ್ಯಲಕ್ಷ್ಮಿ ಗುರುಂ, ಹಾಗೂ ಎಸ್ ಆರ್ ಕಂಠಿ ಬಿ ಇಡಿ ಕಾಲೇಜಿನ ಉಪನ್ಯಾಸಕ ಶ್ರೀ ಶ್ರೀಕಾಂತ ಚಿತ್ತರಗಿ ಮಾತನಾಡಿ ಮಕ್ಕಳ ಸೃಜನಶೀಲತೆ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ಜೋಗಿನ ಮಾತನಾಡಿ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಈ ಶಾಲೆಯ ಶಿಕ್ಷಕರು ಕಡಿಮೆ ಅವಧಿಯಲ್ಲಿ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.ಬಾಲಕಿಯರ ವಸತಿ ನಿಲಯ ಪಾಲಕಿ ಹೆಚ್ ವಾಯ್ ಕಾರಕೂರ, ನಗರಸಭೆ ನಾಮನಿರ್ದೇಶನ ಸದಸ್ಯ ಯಲ್ಲಪ್ಪ, ರಾಜಾಪೂರ,ಬಡಗನ ಸರ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.
ಕಲೆ ಹಾಗೂ ವಿಜ್ಞಾನದಲ್ಲಿ ಹಲವು ರಚನಾತ್ಮಕ ಮಾದರಿಗಳನ್ನು ಪ್ರದರ್ಶಿಸಿದರು. ಈರಮ್ಮ ಜುಂಜಾ ಹಾಗೂ ಶ್ರೀನಿಧಿ ಪ್ರಾರ್ಥಿಸಿದರು. ಬಸೀರಾ ಕೆರೂರ ಮತ್ತು ಮುನಜ್ಜಾ ಹುಂಡೇಕಲ್, ನಾಥ್ ಹಾಗೂ ಕೀರಾತ್ ಪಠಿಸಿದರು.ಮೆಹೆಬೂಬ ಗಂಜಿಕೋಟಿ ಸ್ವಾಗತಿಸಿದರು,ಅತಾರಸೂಲ ಕರ್ನೂಲ್ ಪರಿಚಯಿಸಿದರು.ಪ್ರಾಸ್ತಾವಿಕವಾಗಿ ಕೆ ಎಚ್ ಸೋಲಾಪೂರ ಮಾತನಾಡಿದರು, ಅಮರೇಶ ಬಿಜ್ಜಳ ನಿರೂಪಿಸಿದರು,ಫರಜಾನ ಸೋಲಾಪೂರ ವಂದಿಸಿದರು, ಸಿದ್ಧನಗೌಡ ಮಾಚಾ,ರತ್ನಾ ಹಣಗಿ, ಮಲ್ಲಿಕಾರ್ಜುನ ಬಿಜಾಪೂರ, ಪ್ರಶಿಕ್ಷಣಾರ್ಥಿಗಳು ಇದ್ದರು. ಆಹಾರ ಮೇಳದಲ್ಲಿ ವಿವಿಧ ಭೋಗ ಭಕ್ಷ್ಯಗಳನ್ನು ಸ್ವಂತ ವಿದ್ಯಾರ್ಥಿಗಳೇ ತಯಾರಿಸಿ ಭರ್ಜರಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂತು. ಜನತೆ ಹಾಗೂ ಪಾಲಕರು ಈ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ : ದಾವಲ್ ಶೇಡಂ