Ad imageAd image

ಗ್ಯಾರಂಟಿ ಯೋಜನೆಗಳಿಗೆ  SCP/TSP ಹಣ ಬಳಕೆ ಮಾಡಿದ್ರೇ ತಪ್ಪೇನು : ಸಚಿವ ತಂಗಡಗಿ 

Bharath Vaibhav
ಗ್ಯಾರಂಟಿ ಯೋಜನೆಗಳಿಗೆ  SCP/TSP ಹಣ ಬಳಕೆ ಮಾಡಿದ್ರೇ ತಪ್ಪೇನು : ಸಚಿವ ತಂಗಡಗಿ 
WhatsApp Group Join Now
Telegram Group Join Now

ಕೊಪ್ಪಳ : ರಾಜ್ಯ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಗೆ SCP/TSP ಹಣ ಬಳಕೆ ಮಾಡುತ್ತಿದೆ ಎಂದು ಈಗಾಗಲೇ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮಾರ್ಚ್ 5 ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಇದರ ಬೆನ್ನಲ್ಲೆ ಸಚಿವ ಶಿವರಾಜ್ ತಂಗಡಗಿ ಗ್ಯಾರೆಂಟಿ ಯೋಜನೆಗಳಿಗೆ ಈ ಹಣ ಬಳಸಿದರೆ ತಪ್ಪೇನು?ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗ್ಯಾರಂಟಿ ಯೋಜನೆಗೆ ಅನುದಾನ ಬಳಸುವುದರಲ್ಲಿ ತಪ್ಪೇನು? ಈ ಕುರಿತು ಸದನದಲ್ಲಿ ಕೇಳಲಿ ಉತ್ತರಿಸುತ್ತೇವೆ. ಗ್ಯಾರಂಟಿಗಳಿಗೆ ಎಸ್‌ಸಿಇಪಿ-ಟಿಎಸ್‌ಪಿ ಅನುದಾನ ವರ್ಗಾವಣೆ ಆರೋಪ‌ ವಿಚಾರವಾಗಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಬೇಡ ಎಂದು ಬಿಜೆಪಿಯವರು ಹೇಳಲಿ. ಬಿಜೆಪಿಗರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಎಂದು ವಾಗ್ದಾಳಿ ಮಾಡಿದ್ದಾರೆ.

ಅನುದಾನ ಬಳಕೆ ಮಾಡಿದ್ದೀವಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಅವರು ಕೇಳಲಿ. ನಾವು ಉತ್ತರ ಕೊಡಲು ಸಿದ್ದರಾಗಿದ್ದೇವೆ. ಗ್ಯಾರಂಟಿ ಯೋಜನೆ ಬೇಡ ಎಂದು ಬಿಜೆಪಿಯವರು ಹೇಳಲಿ. ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಕುಟುಕಿದ್ದಾರೆ.

ಇನ್ನು ಪರಿಶಿಷ್ಟ ಜಾತಿ/ಪ.ಪಂ. ಸಮುದಾಯಕ್ಕೆ ಹಣ ಮೀಸಲಿಡುವ ಯೋಜನೆಯನ್ನು ಸಿದ್ದರಾಮಯ್ಯ ಅವರೇ ಜಾರಿಗೆ ತಂದಿದ್ದು. ಬಿಜೆಪಿಯವರೇನಾದರೂ ಈ ಯೋಜನೆ ಮಾಡಿದ್ರಾ? ನಾವು ಬೇರೆ ಸಮುದಾಯಕ್ಕೆ ಹಣ ಬಳಕೆ ಮಾಡುತ್ತಿಲ್ಲ. ದಲಿತ ಸಮುದಾಯಕ್ಕೆ ಹಣ ಕೊಡುತ್ತಿದ್ದೇವೆ ಅಲ್ವಾ ಎಂದು ಸಚಿವರ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!