ರಾಯಚೂರ : ಭಾರತೀಯ ಜನತಾ ಪಕ್ಷ ಕರ್ನಾಟಕ ರಾಯಚೂರು ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತಿಗಳಿಗೆ ಸಲ್ಲಿಸುತ್ತಿರುವ ಹಕ್ಕೊತ್ತಾಯ 2023ರಲ್ಲಿ SCSP ಯಿಂದ 7713.15 ಸಾವಿರ ಕೋಟಿ ರೂ ಮತ್ತು TSP ಯಿಂದ 3430.85 ಸಾವಿರ ಕೋಟಿರೂ ಒಟ್ಟಾರೆ 11144.00 ಸಾವಿರ ಕೋಟಿ ರೂಗಳನ್ನು ಗ್ಯಾರೆಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತು.

ಮೊದಲಸಲ ದಲಿತರ ಮೀಸಲು ನಿಧಿಗೆ ಅನೈತಿಕವಾಗಿ ಕೈ ಹಾಕುವಾಗ ಮುಖ್ಯಮಂತ್ರಿಗಳು ಹಿಂಜರಿಕೆ ತೋರ್ಪಡಿಸಿದ್ದರು. ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಸರ್ಕಾರ ಎಮ್ಮೆ ಚರ್ಮ ಬೆಳಸಿಕೊಂಡು, ಸಂವೇದನೆ ಕಳೆದುಕೊಂಡು ದುರಹಂಕಾರದ ಸ್ಥಿತಿ ತಲುಪಿದೆ.
ಕಳೆದ ವರ್ಷ ಅಂದರೆ 2024ರಲ್ಲಿ ಸರ್ಕಾರ ಇದೇ ಚಾಳಿಯನ್ನು ಮುಂದುವರಿಸಿತು . SCSP ನಿಧಿಯಿಂದ 9980.66 ಸಾವಿರ ಕೋಟಿ ರೂ ಮತ್ತು TSP ನಿಧಿಯಿಂದ 4302.02 ಸಾವಿರ ಕೋಟಿ ರೂ ಒಟ್ಟಾರೆ 14282.68 ಸಾವಿರ ಕೋಟಿ ರೂ ಗಳನ್ನು ಗ್ಯಾರೆಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿತು. ಈಗ ಭಂಡ ಸರ್ಕಾರ ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ.
ಆದರೆ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ , ಪಂಗಡದವರು ಮಾತ್ರ ಇಲ್ಲ, ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್ಸಿ, ಎಸ್ಟಿ ಮಂದಿಗೆ ‘ದಲಿತರ ಮೀಸಲು ನಿಧಿ’ ಗೆ ಕನ್ನ ಹಾಕುತ್ತದೆ ಎಂದರೆ ಇದನ್ನು ಸಾಮಾಜಿಕ ನ್ಯಾಯ ಎನ್ನಲು ಸಾಧ್ಯವೇ?
ಅಲ್ಪಸಂಖ್ಯಾತರಿಗೆಂದೇ ಬಜೆಟ್ಟಿನಲ್ಲಿ ಪ್ರತ್ಯೇಕ ಸಾವಿರಾರು ಕೋಟಿ ತೆಗೆದಿರಿಸಲಾಗಿದೆ. ಆದರೆ ಸರ್ಕಾರ ಗ್ಯಾರೆಂಟಿ ಯೋಜನೆ ಆನುಷ್ಟಾನಕ್ಕೆ ಆ ಹಣ ಮುಟ್ಟುವುದಿಲ್ಲ, ಸರ್ಕಾರಿ ಖಜನೆಯಿಂದಲೇ ಹಣ ಪೂರೈಸುತ್ತದೆ ಎಂದರೆ ಈ ಸರ್ಕಾರ ದಲಿತ ದ್ರೋಹಿ ಅಲ್ಲದೆ ಮತ್ತೇನು?
ವಾಸ್ತವದಲ್ಲಿ SCSP ( ಪರಿಶಿಷ್ಟ ಜಾತಿಗಳ ವಿಶೇಷ ಘಟಕ ಯೋಜನೆ ) ಮತ್ತು TSP ( ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆ ) ಇದರ ಮೂಲ ಉದ್ದೇಶವಾದರೂ ಏನು ?
ಆದರೆ ಈಗ ಏನಾಗಿದೆ? ಯಾವುದೇ ನೀತಿ, ನಿಯಮ ಇಲ್ಲದೆ, ಪೂರ್ವ ಯೋಜನೆ ಇಲ್ಲದೆ ಇದ್ದಬದ್ದವರಿಗೆಲ್ಲ ಗ್ಯಾರೆಂಟಿ ಘೋಷಿಸಿ ತನ್ನ ಕೈಗೆ ತಾನೆ ಹಗ್ಗ ಕಟ್ಟಿಕೊಂಡ ಸರ್ಕಾರ ‘ದಲಿತರ ಮೀಸಲು ನಿಧಿ’ ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಎಸ್ಸಿ, ಎಸ್ಟಿ ಸಮುದಾಯಗಳ, ಡಾ ಅಂಬೇಡ್ಕರ್ ಅಭಿವೃದ್ಧಿ ನಿಗಮ ,ಆದಿಜಾಂಬವ ಅಭಿವೃದ್ಧಿ ನಿಗಮ
,ತಾಂಡ ಅಭಿವೃದ್ಧಿ ನಿಗಮ , ಬೋವಿ ಅಭಿವೃದ್ಧಿ ನಿಗಮ , ವಾಲ್ಮೀಕಿ ಅಭಿವೃದ್ಧಿ ನಿಗಮ , ಲಿಡ್ಕರ್
, ಸಫಾಯಿ ಕರ್ಮಚಾರಿ ಅಭಿವೃಧ್ಹಿ ನಿಗಮ ಈ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೋರಗಿವೆ.
ವರದಿ: ಗಾರಲ ದಿನ್ನಿ ವೀರನ ಗೌಡ




