ಹೈದರಾಬಾದ್ : ಗಣೇಶನಿಗೆ ಮುಸ್ಲಿಂ ಟೋಪಿ ಹಾಕಿ ಪ್ರತಿಷ್ಠಾಪನೆ ವಿವಾದದ ಬೆನ್ನಲ್ಲೇ ಮಧ್ಯಪ್ರದೇಶದ ಸೆಕ್ಯುಲರಿಸಂನ ಉತ್ತುಂಗದಲ್ಲಿ ದೇವಿಗೆ ಬುರ್ಖಾ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಇಂದೋರ್ ನಲ್ಲಿ ಶಿಲ್ಪಿಯೊಬ್ಬರು ಬುರ್ಖಾ ಧರಿಸಿರುವ ದೇವಿಯ ವಿಗೃಹವನ್ನು ರಚಿಸಿದ್ದು, ಇದೀಗ ಹಿಂದೂ ಸಂಘಟನೆಗಳು, ಭಜರಂಗದಳ ಸೇರಿದಂತೆ ಕೆಲ ಸಂಘಟನೆಗಳು ಭಾರೀ ಆಕ್ರೋಶ ಹೊರಹಾಕಿದ್ದು,ಶಿಲ್ಪಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೊಂದೆಡೆ ದೇವಿಗೆ ಬುರ್ಖಾ ಹಾಕಿರುವುದು ಲವ್ ಜಿಹಾದ್ ಗೆ ಪ್ರಚಾರ ನೀಡುವಂತಿದೆ ಹಾಗೂ ಧಾರ್ಮಿಕ ಐಕ್ಯತೆಯ ನೆಪದಲ್ಲಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಭಜರಂಗದಳ ಕಾರ್ಯಕರ್ತರು ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ದೇವಿಯ ಮೂರ್ತಿ ತಯಾರು ಮಾಡಿದ ಶಿಲ್ಪಿ ಲಕ್ಕಿ ಚೌಹಾಣ್ ಗೆ ಭಜರಂಗದಳ ಕಾರ್ಯಕರ್ತರು ಮುಖಕ್ಕೆ ಮಸಿ ಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.