Ad imageAd image

ವ್ಯಾಪಕ ಗುಂಪು ಹತ್ಯೆ,ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಏನ್, ಡಿ, ಎ, ಸರ್ಕಾರದ ವಿರುದ್ದ ಎಸ್,ಡಿ,ಪಿಐ, ಪ್ರತಿಭಟನೆ.

Bharath Vaibhav
ವ್ಯಾಪಕ ಗುಂಪು ಹತ್ಯೆ,ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಏನ್, ಡಿ, ಎ, ಸರ್ಕಾರದ ವಿರುದ್ದ ಎಸ್,ಡಿ,ಪಿಐ, ಪ್ರತಿಭಟನೆ.
WhatsApp Group Join Now
Telegram Group Join Now

ಗೋಕಾಕ: ಎನ್, ಡಿ,ಎ ಸರ್ಕಾರದ ಆಡಳಿತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ವ್ಯಾಪಕ ಗುಂಪು ಹತ್ಯೆ, ಲೂಟಿ ಮತ್ತು ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದ  ಹಿನ್ನೆಲೆಯಲ್ಲಿ ಗೋಕಾಕದ ಬಸವೇಶ್ವರ ವೃತ್ತದಲ್ಲಿ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷ ಗೋಕಾಕ ಸಮಿತಿಯಿಂದ ಪ್ರತಿಭಟನೆ ನಡೆಸಿತು.

ಈ ಸಂದರ್ಬದಲ್ಲಿ ಮೌಜಮ್ಮಾ ಮುಲಾನಿ ಮಾತನಾಡಿ ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಹೇಳಿ ಅದೆ ಭಾರತವನ್ನು ಶಕ್ತಿಹೀನವನ್ನಾಗಿ ಮಾಡಲು ಹೊರಟ ಆರ್,ಎಸ್,ಎಸ್, ಸಂಘಿಗಳಾದ ಬಜರಂಗದಳ, ಶ್ರೀರಾಮ ಸೇನೆಯ ವಿಶ್ವಹಿಂದು ಪರಿಷತ್ ಸಂಘಟನೆಗಳ ಮೇಲೆ ಪ್ರಧಾನಿ‌ಮೋದಿಯವರು ಗಮನಹರಿಸಬೇಕು, ಮತ ಹಾಕುವುದು ನಮ್ಮ‌ ಸಂವಿಧಾನಿಕ ಹಕ್ಕು ಅದನ್ನು ನಾವು ಯಾರಿಗೆ ಬೇಕಾದರೂ ಚಲಾಯಿಸಬಹುದು.

ತಮ್ಮ ವಿರುದ್ದ ಮತ ಚಲಾವಣೆ ಮಾಡಿದವರ ಮೇಲೆ ಅಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ, ಚುನಾವಣೆಯ ನಂತರ ಇಲ್ಲಿಯವರೆಗೆ ಸಾಲು ಸಾಲು ಗುಂಪು ಹತ್ಯೆಗಳು, ಶೋಷಣೆ ಮತ್ತು ಮುಸ್ಲಿಮರ ಅಂಗಡಿ ಲೂಟಿ ಮಾಡುವುದು.

ಮುಸ್ಲಿಂ ಹುಡುಗರ ಮೇಲೆ ಗೋರಕ್ಷಣೆ ಹೆಸರಿನ ಗೂಂಡಾ ಗುಂಪು ಹಲ್ಲೆ ಮಾಡಿ ಅವರ ಮೇಲೆ ಹೀನ ಕೃತ್ಯಗಳುನ್ನು ಮಾಡುತಿದ್ದಾರೆ.

ಅದಲ್ಲದೆ ಮುಸ್ಲಿಂರ ಮೇಲೆ ಉತ್ತರ ಪ್ರದೇಶದಲ್ಲಿ,ಹಿಮಾಚಲ ಪ್ರದೇಶದಲ್ಲಿ,ಮದ್ಯಪ್ರದೇಶದಲ್ಲಿ,ಗುಜರಾತಿನಲ್ಲಿ ಹಲ್ಲೆ ನಡೆದಿದೆ.ಇದು ನಿಲ್ಲಬೇಕು.ಬಿಜೆಪಿ ಇದೇ ರೀತಿ ತನ್ನ ದ್ವೇಷ ನೀತಿಯನ್ನು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಜನರು ಆ ಪಕ್ಷವನ್ನು ಸಂಪೂರ್ಣವಾಗಿ ಕಿತ್ತು ಬಿಸಾಡಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ಮುಂದೆ ನಡೆಯದಂತೆ ಎಚ್ಚರಿಕೆ ನೀಡಿದರು.

ಈ ಪ್ರತಿಭಟನೆಯಲ್ಲಿ ಪಾಲ್ಗೊಂಡವರು:ಮೌಜಮ್ಯಾ ಮುಲಾನಿ, ಇಮ್ರಾನ್ ಅತ್ತಾರ್, ಅಫ್ಲಾಬ್ ಪಟೇಲ್, ಮುಸ್ಲಿ ಆಸಿಫ್, ಹೈದರ್ ಕಿಲ್ಲೇದಾರ್,ಮೌಲಾನಾ ಎಜಾಜ್.ಹಾಗೂ ಎಸ್‌ಡಿಪಿಐ ಬೆಳಗಾವಿ ವಿಧಾನಸಭಾ ಕ್ಷೇತ್ರ ಮುಖಂಡರು, ಕಾರ್ಯಕರ್ತರು, ಸದಸ್ಯರು ಹಾಗೂ ಬೆಂಬಲಿಗರು ಪ್ರತಿಭಟನೆಯಲ್ಲಿ ಬಾಗಿಯಾಗಿದ್ದರು

ವರದಿ :- ಮನೋಹರ್ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!