ಬುಲಾವಾಯೋ (ಜಿಂಬಾಬ್ವೆ): ಆತಿಥೇಯ ಜಿಂಬಾಬ್ವೆ ಕ್ರಿಕೆಟ್ ತಂಡವು ಇಂದಿಲ್ಲಿ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಮೊದಲ ದಿನದ ಎರಡನೇ ಅವಧಿಯ ಆಟದಲ್ಲಿ 81 ಕ್ಕೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಇಲ್ಲಿನ ಕ್ವೀನ್ಸ್ ಪಾರ್ಕ್ ಮೈದಾನದಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆ 43 ರನ್ ಗಳಾಗುವಷ್ಟರಲ್ಲಿ 3 ವಿಕೆಟ್ ಹಾಗೂ 67 ರನ್ ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಕಂಡಿತು. ಜಿಂಬಾಬ್ವೆ ಪರವಾಗಿ ಬ್ರೆಂಡನ್ ಟೇಲರ್ ಮಾತ್ರ 44 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದು, ಕಿವೀಸ್ ಬೌರುಗಳಿಗೆ ಪ್ರತಿರೋಧ ಒಡ್ಡುತ್ತಿದ್ದರು. ನ್ಯೂಜಿಲೆಂಡ್ ಪರವಾಗಿ ಮ್ಯಾಟ್ ಹೆನ್ರಿ 30 ಕ್ಕೆ 2 ಹಾಗೂ ಜಾಕ್ರಿ ಪೋಲ್ಕಸ್ 24 ಕ್ಕೆ 2 ವಿಕೆಟ್ ಪಡೆದರು.




