ಬಾಗಲಕೋಟೆ:-ಸಾರ್ವಜನಿಕರ, ಕುರಿ, ಆಡು,ದನಕರುಗಳಿಗೆ ಎಂಜೆಕ್ಸನ್ ಮಾಡಿದರೆ ಈ ಅಧಿಕಾರಿಗೆ ದುಡ್ಡು ಕೊಡಬೇಕು.ಸರಕಾರಿ ಪಶು ಆಸ್ಪತ್ರೆಗೆ ಔಷದಿ ಸಪ್ಲಾಯಿ ಇಲ್ಲವಂತೆ ,ಈ ಅಧಿಕಾರಿ ಸರಕಾರಿ ಅಧಿಕಾರಿ
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಾಯದಗುಂದಿ ಪ್ರಾಥಮಿಕ ಪಶು ಆಸ್ಪತ್ರೆಯ ಅಧಿಕಾರಿಯ ವರ್ತನೆ ನೋಡು ಆ ಅಧಿಕಾರಿ ಯಾರು ಅಂತಿರಾ ? Dr ಪಮ್ಮಾರ್ ಅವನ ಹೆಸರು ನಾಗರಾಳ sp ಗ್ರಾಮದ ಶಿವು ಮಜ್ಜಗಿ ಅವರ ಆಡು ರೋಗದಿಂದ ಬಳಲುತಿತು ಶಿವು ಮಜ್ಜಗಿ ಅವರು ದೂರವಾಣಿ ಮೂಲಕ ಪಶು ವೈದ್ಯಧಿಕಾರಿ ಡಾಕ್ಟರ್ ಪಮ್ಮರ್ ಅವರಿಗೆ ನಮ್ಮ ಹಾಡುಗಳಿಗೆ ಆರಾಮಿಲ್ಲ ಎಂದು ಹೇಳಿದರು.
dr ಪಮ್ಮಾರ್ ನಾಗರಾಳ ಗ್ರಾಮಕ್ಕೆ ಬಂದು ಹಾಡುಗಳಿಗೆ ಉಣ್ಣಿ ಎನ್ನೆಯ ಟ್ಯೂಬ್ ಮೆಡಿಸಿನ್ ಕೊಟ್ಟ ನಂತರ ಸರ್ಕಾರಿ ಡಾಕ್ಟರ್ 500 ರೂಪಾಯಿಗಳಿಗೆ ಬೇಡಿಕೆ ಇಡುತ್ತಾನೆ ಮತ್ತು ಮಂಜು ಚಿಕ್ಕದ್ಯಾವಪ್ಪನವರ ಹಾಡುಗಳಿಗೆ ಮೇಕೆಗೆ ಅಲ್ಲಿ ಸಹ ಒಂದು ನೂರು ರೂಪಾಯಿಗಳನ್ನು ಪಡೆದುಕೊಂಡಿರುತ್ತಾನೆ ಎಂದು ಹೇಳುತ್ತಾರೆ.
ಆದರೆ ?… ಸರ್ಕಾರಿ ದಿಂದ ಬಂದಂತ ಔಷಧಿ ಎಲ್ಲಿ ಹೋಯಿತು ?
ಸರ್ಕಾರಿ ಪಶು ಆಸ್ಪತ್ರೆಗೆ ಸರ್ಕಾರದಿಂದ ಔಷಧಿ ಸಪ್ಲಾಯಿ ಆಗುದಿಲ್ವಾ ?…ಎಷ್ಟು ವರ್ಷ ಆಯ್ತು ಸರ್ಕಾರಿ ಆಸ್ಪತ್ರೆಗೆ ಔಷಧಿ ಬರದೇ ಇರುವುದು ?…ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಅಧಿಕಾರಿಯನ್ನು ಏನು ಕೇಳುವುದಿಲ್ಲಲ್ವಾ ?..
ನಾಗರಾಳ sp ಗ್ರಾಮದ ಸಾರ್ವಜನಿಕರು ಲಾಯದಗುಂದಿ ಪಶು ಆಸ್ಪತ್ರೆಯ ವ್ಯಕ್ತಿಗೆ ಬರುವ ಹಳ್ಳಿಗಳಿಗೆ ಬರುವ ರೂಲ್ಸ್ ಇಲ್ಲವಂತೆ ಅವರಿಗೆ. ಏನೇ ಸಮಸ್ಯೆ ಆದ್ರೂ ಆಸ್ಪತ್ರೆಗೆ ತರಬೇಕು ಕುರಿ ಮೇಕೆ,ಜಾನುವಾರಗಳನ್ನು ಆಸ್ಪತ್ರೆಗೆ ತರಬೇಕು ಎಂದು ಡಾಕ್ಟರ್ ಪಮಾರ್ ಅವರು ಹೇಳುತ್ತಾರೆ.
ಹಾಗಾದ್ರೆ. ಸರ್ಕಾರವು ಗ್ರಾಮೀಣಮಟ್ಟದಲ್ಲಿ ಅಕ್ಕ ಪಕ್ಕಗಳ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪ್ರಾಥಮಿಕ ಪಶು ಆಸ್ಪತ್ರೆ ತೆಗೆದಿರುತ್ತಾರೆ. ಅಲ್ಲಿಯ ವೈದ್ಯಾಧಿಕಾರಿಗಳು ಸುಮಾರು ವಾರಕ್ಕೆ ಎರಡರಿಂದ ಮೂರು ದಿವಸ ವಾದರೂ ಭೇಟಿ ನೀಡಿ ಅಲ್ಲಿಯ ಕುರಿ ಮೇಕೆ ಜಾನುವಾರುಗಳಿಗೆ ಚಿಕಿತ್ಸೆ ಉಚಿತವಾಗಿ ನೀಡಲು ಅವರಿಗೆ ಅವಕಾಶವಿರುತ್ತದೆ. ಅಧಿಕಾರಿಗಳು ಯಾವುದೇ ರೀತಿ ದುಡ್ಡಿಗೆ ಬೇಡಿಕೆ ಇಡಬಾರದು.
ಆದರೆ ಡಾಕ್ಟರ್ ಪಮಾರ್ ಅವರು ದುಡ್ಡಿಗೆ ಬೇಡಿಕೆ ಇಟ್ಟು ದುಡ್ಡು ಪಡೆದುಕೊಂಡು ಸಾರ್ವಜನಿಕರಿಗೆ ದೊಡ್ಡ ಧ್ವನಿಯಲ್ಲಿ ನಿಂದಿಸಿರುತ್ತಾರೆ ಧಮ್ಕಿಯಾಕಿದ್ದಾರೆ ಮತ್ತು ನೀನು ಯಾರಿಗೆ ಹೇಳ್ತಿ ಹೇಳು?
ಯಾವ ಅಧಿಕಾರಿಗೆ ಹೇಳು ?
ಸಾರ್ವಜನಿಕರು ಅಧಿಕಾರಿಗೆ ದುಡ್ಡು ತಪ್ಪು ಎಂದು ಹೇಳಿದಾಗ ಬೈಕಿಗೆ ಪೆಟ್ರೋಲ್ ಹಾಕುವುದು ಯಾರು ? ಪ್ರಶ್ನೆ ಮಾಡುತ್ತಾನೆ ಅಧಿಕಾರಿ.
ಕೂಡಲೇ ಪ್ರಾಥಮಿಕ ಪಶು ಇಲಾಖೆಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಬಂದು ಸ್ಥಳಕ್ಕೆ ಭೇಟಿ ನೀಡಿ ಈ ಪಶು ವೈದ್ಯಾಧಿಕಾರಿಯ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ .
ವರದಿ:-ದಾವಲ್ ಶೇಡಂ