ಏಪ್ರಿಲ್ 17ರಂದು ತಮನ್ನಾ ನಟನೆಯ ಹೊಸ ಚಿತ್ರ ‘ಒಡೆಲಾ 2’ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ತಮನ್ನಾ ಮುಂಬೈನ ಶ್ರೀ ಬಾಬುಲ್ನಾಥ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಾಮಾನ್ಯವಾಗಿ ಮಾರ್ಡನ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳುವ ತಮನ್ನಾ, ಸೀರೆಯಲ್ಲಿ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ದರು. ಆ ಸಮಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮನ್ನಾ ಲೀವಿಂಗ್ ಸ್ಟೈಲ್ ನೋಡಿ: ಪ್ರಸ್ತುತ ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಈಗ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ಗಳ (SUV) ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸೆಲೆಬ್ರಿಟಿಗಳು ಸೇರಿದಂತೆ ಮಧ್ಯಮ ವರ್ಗದವರು ಸಹ ತಮ್ಮ ಆಯ್ಕೆಯ ಎಸ್ಯುವಿಗಳನ್ನು ಖರೀದಿಸುತ್ತಿದ್ದಾರೆ. ಸೆಲೆಬ್ರಿಟಿಗಳಲ್ಲಿ ಆಫ್-ರೋಡ್ ಸಾಹಸಗಳಿಗೆ ಸೂಕ್ತವಾದ ಐಷಾರಾಮಿ ಎಸ್‌ಯುವಿಗಳಿಗೆ ಭಾರಿ ಬೇಡಿಕೆಯಿದೆ. ಇತ್ತೀಚೆಗೆ ಅನೇಕ ಸಿನಿಮಾ ತಾರೆಯರು ಇಂತಹ SUVಗಳನ್ನು ಖರೀದಿಸಿದ್ದಾರೆ ಮತ್ತು ಖರೀದಿಗೆ ಮುಂದಾಗುತ್ತಿದ್ದಾರೆ.
ರೇಂಜ್ ರೋವರ್ ವೆಲಾರ್ ಪ್ರಸ್ತುತ ಸಂಪೂರ್ಣವಾಗಿ ಲೋಡ್ ಮಾಡಲಾದ ಒಂದೇ HSE ಟ್ರಿಮ್‌ನಲ್ಲಿ ಲಭ್ಯವಿದೆ. ಇದು D200 (ಡೀಸೆಲ್ ಮೈಲ್ಡ್ ಹೈಬ್ರಿಡ್) ಮತ್ತು P250 (ಫೋರ್ ಸಿಲಿಂಡರ್ ಪೆಟ್ರೋಲ್) ಎಂಬ ಎರಡು ರೂಪಾಂತರಗಳಲ್ಲಿ ಸಿಗುತ್ತಿದೆ.
ರೇಂಜ್ ರೋವರ್ ವೆಲಾರ್ ಎಸ್‌ಯುವಿಯ ಪ್ರಸ್ತುತ ಬೆಲೆ ಸುಮಾರು 87.90 ಲಕ್ಷ ರೂ.ಗಳಷ್ಟಿದೆ. ಇದನ್ನು ರಸ್ತೆಗೆ ತರಲು ಸುಮಾರು 1.10 ಕೋಟಿ ರೂ. ವೆಚ್ಚವಾಗುತ್ತದೆ. 2024ರ ಅಪ್ಡೇಟ್ನಲ್ಲಿ ವೆಲಾರ್ ಕೆಲವು ವಿನ್ಯಾಸ ಬದಲಾವಣೆಗಳೊಂದಿಗೆ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತು. ಈ ಎಸ್‌ಯುವಿ ಈಗ ಹೊಸದಾಗಿ ವಿನ್ಯಾಸಗೊಳಿಸಲಾದ ಗ್ರಿಲ್, ತೆಳುವಾದ ಟೈಲ್ ಲ್ಯಾಂಪ್‌ಗಳು, ದೊಡ್ಡ ರಿಯರ್ ಓವರ್‌ಹ್ಯಾಂಗ್ ಮತ್ತು ಹೊಸ ಪಿಕ್ಸೆಲ್ ಎಲ್‌ಇಡಿ ಹೆಡ್‌ಲೈಟ್‌ಗಳನ್ನು ಒಳಗೊಂಡಿದೆ.
ಈಗ ನಟಿ ತಮನ್ನಾ ಭಾಟಿಯಾ ಅವರ ಕಲೆಕ್ಷನ್ಗೆ ಈ ಕಾರು ಸೇರ್ಪಡೆಯಾಗಿದೆ. ಅವರು ಮಾರ್ಚ್ 29ರಂದು ಹೊಸ ಕಾರನ್ನು ಬುಕ್ ಮಾಡಿದ್ದರು. ವಾಹನ ದಾಖಲೆಗಳ ಪ್ರಕಾರ, ಈ ಎಸ್‌ಯುವಿ ತಮನ್ನಾ ಜೆಮ್ಸ್ ಅಂಡ್ ಜ್ಯುವೆಲ್ಲರಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದ್ದು, ಅದರಲ್ಲಿ ತಮನ್ನಾ ನಿರ್ದೇಶಕಿಯಾಗಿದ್ದಾರೆ. ತಮನ್ನಾ ಅವರು ಆರೋರೆಸ್ ಗ್ರೇ ಬಣ್ಣದ ಆಯ್ಕೆಯಲ್ಲಿ ರೇಂಜ್ ರೋವರ್ ವೆಲಾರ್ ಡೀಸೆಲ್ ರೂಪಾಂತರವನ್ನು ಆರಿಸಿಕೊಂಡರು.