ಕೆಲವು ಜನರಿಗೆ ಚಪಾತಿಯೊಂದಿಗೆ ಇಲ್ಲವೆ ರೊಟ್ಟಿಯ ಜೊತೆಗೆ ಚಟ್ನಿ ಇದ್ದರೆ ಸಾಕು ಇಷ್ಟಪಟ್ಟು ಸೇವಿಸುತ್ತಾರೆ. ಮನೆಯಲ್ಲಿ ಏನೂ ಇಲ್ಲದಿದ್ದಾಗ ರೊಟ್ಟಿ, ಚಟ್ನಿ ತಿಂದರೆ ಮನಸ್ಸಿಗೆ ಸಂತೃಪ್ತಿ ಲಭಿಸುತ್ತದೆ. ಇದರಿಂದ ಹೆಚ್ಚಿನ ಜನರು ಸಿದ್ಧಪಡಿಸುವ ಖಾದ್ಯಗಳಲ್ಲಿ ಟೊಮೆಟೊ ಚಟ್ನಿ ಪ್ರಮುಖ ಸ್ಥಾನದಲ್ಲಿ ಬರುತ್ತದೆ. ಯಾವಾಗಲೂ ಒಂದೇ ಪ್ರಕಾರ ಅಡುಗೆಗೆ ಅಂಟಿಕೊಳ್ಳುವ ಬದಲು ಹೊಸ ರೆಸಿಪಿ ಟ್ರೈ ಮಾಡಬೇಕಾಗುತ್ತದೆ. ಅದಕ್ಕಾಗಿ ನಾವು ನಿಮಗಾಗಿ ಸೂಪರ್ ರುಚಿಯ ‘ಕೊತ್ತಂಬರಿ ಟೊಮೆಟೊ ಚಟ್ನಿ’ ರೆಸಿಪಿ ತಂದಿದ್ದೇವೆ.
ಸಖತ್ ರುಚಿಯ ಈ ಚಟ್ನಿಯನ್ನು ಬಿಸಿ ಬಿಸಿಯಾದ ಅನ್ನ ಇಲ್ಲವೆ ರೊಟ್ಟಿಯೊಂದಿಗೆ ತಿಂದರೆ ಅದ್ಭುತವಾಗಿರುತ್ತದೆ. ಈ ಚಟ್ನಿಯನ್ನು ಅನ್ನ, ಚಪಾತಿ, ಇಡ್ಲಿ, ದೋಸೆ, ವಡೆ, ಪೂರಿ ಹೀಗೆ ವಿವಿಧ ಉಪಹಾರಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ. ಅತ್ಯಂತ ಜನಪ್ರಿಯ ಚಟ್ನಿಗಳಲ್ಲಿ ಒಂದಾಗಿದೆ. ಇದನ್ನು ರೆಡಿ ಮಾಡುವುದು ಕೂಡ ತುಂಬಾ ಸರಳ ಮತ್ತು ಸುಲಭವಾಗಿದೆ.