ಹುಮನಾಬಾದ: ಐತಿಹಾಸಿಕ ಸುಪ್ರಸಿದ್ದ ಶ್ರೀ ಸೀಮಿ ನಾಗನಾಥ ಜಾತ್ರಾ ಮಹೋತ್ಸವ ಇಂದು ನವೆಂಬರ್ 6 ರಿಂದ ನವೆಂಬರ್ 13 ಜರುಗಲಿದೆ ಎಂದು ಶ್ರೀ ಸೀಮಿ ನಾಗನಾಥ ದೇವಸ್ಥಾನ ಕಾರ್ಯದರ್ಶಿ ಅನಿಲಕುಮಾರ ಗೌಡನ್ ಗುರು ತಿಳಿಸಿದ್ದಾರೆ.
ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ ಬಿ ಪಟ್ಟಣದ ಹೊರವಲಯದಲ್ಲಿರುವ ಸೀಮಿ ನಾಗನಾಥ ದೇವಸ್ಥಾನದಲ್ಲಿ ಗುರುವಾರ ಬಿವಿ5 ನ್ಯೂಸ್ ಜೊತೆಗೆ ಮಾತನಾಡಿ ತಿಳಿಸಿದರು.
ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ಸೀಮಿ ನಾಗನಾಥ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿ:ಸಜೀಶ ತಾಳಮಡಗಿ




