ಬೀದರ : ಸರ್ಕಾರಿ ಹೊರಗುತ್ತಿಗೆ ಹೊರಗುತ್ತಿಗೆ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ
ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸುಧಾಕರ ಅವರು ತಿಳಿಸಿದರು. ನಗರದ ಗುರುನಾನಕ್ ಕಾಲೋನಿಯಲ್ಲಿ ವೈಷ್ಣವಿ ಕನ್ವೇಷನ್ ಸಭಾಂಗಣದಲ್ಲಿ ನಡೆದ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಸಾವಿ ರಾರು ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವುದೇ ರೀತಿ ಯ ಸಕಾಲಕ್ಕೆ ಸಹಾಯಧನ ಹಾಗೂ ಸೇವಾ ಭದ್ರತೆಯಿಲ್ಲ. ಮುಂಬ ರುವ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗುವ ಮೂಲಕ ಸಂಘಟನೆ ಬಲಿಷ್ಟ ಮಾಡುವುದರ ಜತೆಗೆ ಸರಕಾರದ ಮಟ್ಟದಲ್ಲಿ ನ್ಯಾಯ ಕೇಳೋಣ ಎಂದು ತಿಳಿಸಿದರು.
ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ರಾಠೋಡ ಮಾತನಾಡಿ, ಬೀದರ ಜಿಲ್ಲೆಯಲ್ಲಿ ನೌಕರರ ಸಂಘವು ಬಲಿಷ್ಠವಾಗಿ ಮಾಡಲು ಎಲ್ಲರೂ ಸಹಕರಿಸಬೇಕು ರಾಜ್ಯಾಧ್ಯಕ್ಷರು ನನಗೆ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದಾರೆ ಅದನು ನಾನು ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸುತ್ತೇನೆ.
ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಜಿಲ್ಲಾಧ್ಯಕ್ಷರಾಗಿ ಲಕ್ಷ್ಮಣ ರಾಠೋಡ, ಉಪಾಧ್ಯಕ್ಷರಾಗಿ ಶ್ರೀದೇವಿ, ಮಾಣಿಕ, ಸತೀಶ್ ಪಾಟೀಲ್, ಅನಿಲಕುಮಾರ, ಸಾಜಿದ , ಪ್ರಧಾನ ಕಾರ್ಯದರ್ಶಿಯಾಗಿ ಅವಿನಾಶ್, ಖಜಾಂಚಿ ಮಹಾದೇವ ಮಂಠಾಳೆ, ಸಂಘಟನಾ ಕಾರ್ಯದರ್ಶಿ ಲೋಕೇಶ್, ರೇಖಾ, ಹರಿದೇವ ಹಾಗೂ ತಾಲೂಕಿನ ಅಧ್ಯಕ್ಷರಾದ ಔರಾದ್ ಶಿವಕುಮಾರ್ ಲಾಧ, ಬೀದರ್ ಶಿವಕುಮಾರ್ ಸೇನಾ, ಬಸವಕಲ್ಯಾಣ ಜಗದೀಶ್ ಪಾಟೀಲ್ , ಹುಮನಾಬಾದ್ ಸಂದೀಪ್ , ಭಾಲ್ಕಿ ಅಮರ್ ಮಜಗೆ, ಸೇವೆ ಸಲ್ಲಿಸುತ್ತಿರುವ ಈ ಸಂದರ್ಭದಲ್ಲಿ 36 ಇಲಾಖೆಯ ನೂರಾರು ಸದಸ್ಯರು ಉಪಸ್ಥಿತರಿದ್ದರು.
ವರದಿ: ಸಂತೋಷ್ ಬಿಜಿ ಪಾಟೀಲ್, ಬೀದರ್