Ad imageAd image

” ಚಿತ್ರದುರ್ಗಾ ಜಿಲ್ಲೆಯ ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಎಸ್ಸಿಎಸ್ಟಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ”

Bharath Vaibhav
” ಚಿತ್ರದುರ್ಗಾ ಜಿಲ್ಲೆಯ ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಎಸ್ಸಿಎಸ್ಟಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ”
WhatsApp Group Join Now
Telegram Group Join Now

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಎಸ್ಸಿಎಸ್ಟಿ ನೌಕರರ ಸಂಘದ‌ ರಾಜ್ಯಾಧ್ಯಕ್ಷ ಮಹೇಶ್ ಸಿ ಹುಬಳಿ ಅವರ ನಿರ್ದೇಶನ ಮೇರೆಗೆ ಚಿತ್ರದುರ್ಗಾ ಜಿಲ್ಲೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ
ಕರಣ್ ಶೀಲ ಟಿ ಮೌರ್ಯ ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ‌ ಅವರ ನೇತೃತ್ವದಲ್ಲಿ
ಚಿತ್ರದುರ್ಗದಲ್ಲಿ ಮಹತ್ವದ ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾಗಿ ರವಿಕುಮಾರ್ ಆರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಟಿ. ಶ್ರೀನಿವಾಸ್ ಮೂರ್ತಿ ಅವರನ್ನು ಸರ್ವಾನು ಮತದಿಂದ
ಆಯ್ಕೆ ಮಾಡಲಾಯಿತು.

ನಂತರ ನೂತನ ಅಧ್ಯಕ್ಷ ಹಾಗೂ ಪ್ರದಾನ ಕಾರ್ಯದರ್ಶಿ ಅವರಿಗೆ ನೇಮಕಾತಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ರಾಜ್ಯದಲ್ಲಿ ಸರ್ಕಾರಿ ಅರೆ ಸರ್ಕಾರಿ ನೌಕರರ ಸಮಸ್ಯೆಗಳು ಎದುರಿಸ ಬೇಕಾದರೆ ಈಗಿನ ಪರಿಸ್ಥಿತಿಯ ಸಂಘಟನೆ ಬಹಳ ಅಗತ್ಯ ಇದೆ ಆ ಒಂದು ದೃಷ್ಟಿಯಿಂದ ನಮ್ಮ ರಾಜ್ಯ ಅಧ್ಯಕ್ಷರಾದ ಮಹೇಶ್ ಸಿ ಹುಬಳಿ ಅವರು ಪದೆ ಪದೆ ನಮಗೆ ಆಗ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಸಂಘಟನೆ ಮಾಡುವುಣ ಎಂದು ರಾಜ್ಯ ಕಾರ್ಯಾಧ್ಯಕ್ಷ ಕರುಣ ಶೀಲ ಮೌರ್ಯ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ಅವರು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ರಾಜ್ಯಾಧ್ಯಕ್ಷ ನಾಗರಾಜ್ , ಗೌರವಾಧ್ಯಕ್ಷ ರುದ್ರಮುನಿ, ವಾಗಿಷ್ ಕುಮಾರ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಶಿಕಲಾ ಎಸ್ ನರೋಣಕರ್ ಸೇರಿದಂತೆ ರಾಜ್ಯ ಜಿಲ್ಲಾ ತಾಲೂಕ ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದ್ದರು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಸುಧಾಕರ್ ಎಸ್ ಜಡಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!