ಕಲಬುರಗಿ : -ಕನ್ನಡ ಭವನದಲ್ಲಿ ಕನಾ೯ಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಕಲಬುರಗಿ ಜಿಲ್ಲಾ ಸವ೯ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನಾರಚನೆಯನ್ನು ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ ರವರ ನೇತೃತ್ವದಲ್ಲಿ ಮಾಡಲಾಯಿತು.

ನೂತನ ಜಿಲ್ಲಾ ಸಂಚಾಲಕರಾಗಿ ಸಂಜೀವಕುಮಾರ ಜವಳಕರ್, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಬಾಬುರಾವ್ ಶೆಳ್ಳಗಿ, ಶ್ರೀಹರಿ ಕರಕಳ್ಳಿ, ಮಾರುತಿ ಹುಳಗೋಳಕರ, ಸೋಮಶೇಖರ ಬೇಡಕಪಳ್ಳಿ, ಮಹಾಂತೇಶ ದೊರೆ, ಸತೀಶ ಕೋಬಾಳಕರ್, ವಿಜಯಕುಮಾರ ಸಜ್ಜನ, ಜಿಲ್ಲಾ ಖಜಾಂಚಿಯಾಗಿ ದೇವೇಂದ್ರ ಕುಮಸಿ ಆಯ್ಕೆ ಮಾಡಲಾಯಿತು, ಈ ಸಂಧರ್ಭದಲ್ಲಿ ಸಭೆಯನ್ನು ಉದ್ದೇಶೀಸಿ ಮಾತನಾಡಿದ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ,ನಿಮ್ಮ ನಾಯಕತ್ವದಲ್ಲಿ ಮುಂದಿನ ತಲೆಮಾರಿಗೆ ಏನನ್ನು ರವಾನಿಸುತ್ತೀರಿ ಎಂಬುದರ ಮೇಲೆ ಚಳುವಳಿ ನಿಂತಿರುತ್ತದೆ. ಸಮ ಸಮಾಜ ನಿರ್ಮಾಣದಲ್ಲಿ ಕೈಜೋಡಿಸಿ ಚಳುವಳಿ ನಡೆಸಬೇಕಾಗಿದೆ.ಪ್ರೊಫೆಸರ್ ಬಿ ಕೃಷ್ಣಪ್ಪ ಅವರಿಂದ ಇಲ್ಲಿಯವರೆಗೂ ಅನೇಕ ಹೋರಾಟ ಮಾಡುತ್ತಾ ಸಾವಿರಾರು ಸವಾಲುಗಳು ಎದುರಿಸಿ ಹೋರಾಟದ ಕಿಚ್ಚು ಹಚ್ಚಿ,ಚಳುವಳಿ ಮಾಡುತ್ತಾ ನಮ್ಮ ಈ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಬಂದಿದೆ.

ಹಾಗೂ ಬಾಬಾ ಸಾಹೇಬರ ಹೋರಾಟದ ಫಲ ನಮ್ಮ ಮೇಲಿದೆ.ಸಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ಮತ್ತು ಗುರಿ ಹೋರಾಟದ ಮುಖಾಂತರ ಮಾಡೋಣ, ಜಿಲ್ಲಾ, ತಾಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಸಂಘಟನೆ ಅತೀ ಹೆಚ್ಚು ಕೆಲಸ ಮಾಡುವ ಮೂಲಕ ಘಟ್ಟಿಗೊಳಿಸಿ ಪ್ರೊ.ಬಿ ಕೃಷ್ಣಪ್ಪ ಕಟ್ಟಿದ ಚಳುವಳಿ ಮತ್ತು ಅವರ ವಿಚಾರ ಎಲ್ಲರಿಗೂ ತಿಳಿಸಿ, ಸಮಿತಿ ಬಲಬಡಿಸಬೇಕು ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ನೂತನ ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ ಡಾಕುಳಕಿ, ರಾಮಣ್ಣ ಕಲ್ಲ ದೇವನಹಳ್ಳಿ, ರಾಜ್ಯ ಸಮಿತಿ ಸದಸ್ಯರಾದ ನಾಗಣ್ಣ ಬಡಿಗೇರ, ಅಜು೯ನ ಗೊಬ್ಬರ್, ಕಲಬುರಗಿ ವಿಭಾಗೀಯ ಸಂಚಾಲಕರಾದ ಶ್ರೀ ನಿವಾಸ ಖೇಳಗಿ ಮತ್ತು ವಿಭಾಗೀಯ ಸಂಘಟನಾ ಸಂಚಾಲಕರಾದ ಗೋಪಾಲ ರಾಂಪುರ, ರಾಜಕುಮಾರ ಬನ್ನೇರ್, ಬೆಳಗಾವಿ ವಿಭಾಗೀಯ ಸಂಚಾಲಕರಾದ ಸಂಜುಕುಮಾರ ಕಬ್ಬಾಂಗಿ,ಬೀದರ್ ಜಿಲ್ಲಾ ಸಂಚಾಲಕರಾದ ರಮೇಶ ಮಂದಕನಹಳ್ಳಿ, ಸಭೆಯಲ್ಲಿ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಭಾಗವಹಿಸಿದ್ದರು.
ವರದಿ : ಹಣಮಂತ ಕುಡಹಳ್ಳಿ




