ಹುಕ್ಕೇರಿ : ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಆಡಳಿತ ಮಂಡಳಿಯ ಸಭೆ ಮಂಗಳವಾರ ಸಂಘದ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು

ಈ ಸಂದರ್ಭದಲ್ಲಿ ಏಕಮತದಿಂದ ಆಯ್ಕೆ ಮಾಡಲಾಯಿತು.
ಸಂಘದ ನೂತನ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಇವರ ಆಯ್ಕೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ರಮೇಶ ಕತ್ತಿ ನೇತೃತ್ವದ ಸಾಧನೆಯ ಮುಂದುವರಿಕೆ – ನಿಲಜಗಿ ಅಧ್ಯಕ್ಷ, ಮುನ್ನೋಳ್ಳಿ ಉಪಾಧ್ಯಕ್ಷ
ಇಂದು ನಡೆದ ಮಹತ್ವಪೂರ್ಣ ಸಭೆಯಲ್ಲಿ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘಕ್ಕೆ ಮಹಾವೀರ್ ನಿಲಜಗಿ ಅವರನ್ನು ನೂತನ ಅಧ್ಯಕ್ಷರಾಗಿ ಹಾಗೂ ಅಜಿತ್ ಮುನ್ನೋಳ್ಳಿ ಅವರನ್ನು ಉಪಾಧ್ಯಕ್ಷರಾಗಿ ಮತದಿಂದ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಪ್ರಕ್ರಿಯೆ ಶ್ರೀ ರಮೇಶ ಕತ್ತಿ ಅವರ ಮಾರ್ಗದರ್ಶನದಲ್ಲಿ, ಮಾಜಿ ಶಾಸಕ ಎ.ಬಿ. ಪಾಟೀಲ ಹಾಗೂ ನಿಖಿಲ ಕತ್ತಿ ಅವರ ಸಕ್ರಿಯ ಪ್ರೋತ್ಸಾಹದಲ್ಲಿ ಶಿಸ್ತಿನಿಂದ ನಡೆಯಿತು.
ಸಂಘದ ಸದಸ್ಯರು, ನಿರ್ದೇಶಕರ ಮಂಡಳಿ ಮತ್ತು ವಿವಿಧ ಕ್ಷೇತ್ರದ ಮುಖಂಡರು ಈ ಸಭೆಯಲ್ಲಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ತಮ್ಮ ಬೆಂಬಲ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಶ್ರೀ ರಮೇಶ ಕತ್ತಿ ಅವರು, “ವಿದ್ಯುತ್ ಸಹಕಾರಿ ಸಂಘವು ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಸೇವೆ ನೀಡುತ್ತಿರುವ ಮಹತ್ವದ ಸಂಸ್ಥೆಯಾಗಿದೆ. ಹೊಸ ನೇತೃತ್ವದೊಂದಿಗೆ ಇನ್ನೂ ಪ್ರಭಾವಿ ಸೇವೆ ನೀಡಬೇಕೆಂಬ ನಿರೀಕ್ಷೆಯಿದೆ” ಎಂದು ಹೇಳಿದರು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಮಹಾವೀರ್ ನಿಲಜಗಿ ಮತ್ತು ಅಜಿತ್ ಮುನ್ನೋಳ್ಳಿ ಅವರಿಗೆ ವಿವಿಧ ಸಂಘಟನೆಗಳ ವತಿಯಿಂದ ಅಭಿನಂದನೆಗಳು, ಪುಷ್ಪಗುಚ್ಛಗಳು ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಹಲವಾರು ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಸಹಕಾರಿ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು. ಅವರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಶುಭಾಶಯ ಕೋರಿದರು.
ವರದಿ : ಶಿವಾಜಿ ಎನ್ ಬಾಲೇಶಗೋಳ




