ಸೇಡಂ : ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉತ್ನಾಳ ಗ್ರಾಮದ ಸಂಗಮೇಶ ಹತ್ತರಕಿಹಾಳ ಅವರು ಲೇಖಕರಾಗಿ ಮತ್ತು ಅಂಕಣ ಬರಹಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವಂತಹ ಅಪೂರ್ವ ಸಾಧನೆಯ ಕಾರ್ಯವೈಖರಿಯನ್ನು ಗುರುತಿಸಿ ಇದೇ ಮಾರ್ಚ್ ೦1 ರಂದು ದಾವಣಗೆರೆ ಜಿಲ್ಲೆಯ ಕನ್ನಡ ಭವನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕಲಾ ಸಮ್ಮೇಳನದಲ್ಲಿ “ರಾಷ್ಟ್ರ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ “ಯನ್ನು ನೀಡಿ ಗೌರವಿಸಲಾಗುತ್ತಿದೆ. ರಾಜು ಸುಲೇನಹಳ್ಳಿ ಅವರ ಸಾರಥ್ಯದ ತನುಶ್ರೀ ಸಾಹಿತ್ಯ ಪ್ರಕಾಶನ ಮತ್ತು ಬೆಳಕು ಸಾಹಿತ್ಯ ಟ್ರಸ್ಟ್ ಅವರ ವತಿಯಿಂದ ಜರುಗಲಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




