ಬಾಗಲಕೋಟ: ಇವತ್ತಿನ ದಿನ ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯ ನೂತನ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಕರ್ನಾಟಕ ಸ್ವಾಭಿಮಾನಿ ಪಡೆ ಸಂಘಟನೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ನವೀನ್ ಕಪಾಲಿ ಅವರ ನೇತೃತ್ವದಲ್ಲಿ ಇವತ್ತಿನ ದಿನ 25ಕ್ಕೂ ಹೆಚ್ಚು ಜನರು ಬದಾಮಿ ಪ್ರವಾಸಿ ಮಂದಿರದಲ್ಲಿ ಸೇರ್ಪಡೆಯಾದರು ಹಾಗೂ ಜಿಲ್ಲಾ ಅಧ್ಯಕ್ಷರು ಜಗದೀಶ ಕರ್ಪೂರಮಠ ಅವರು ಆದೇಶ ಪತ್ರ ನೀಡಿ ಕನ್ನಡ ನಾಡು ನುಡಿ ನೆಲದ ಬಗ್ಗೆ ಮಾತು ನಾಡಿದರು.
ತಾಲೂಕು ಅಧ್ಯಕ್ಷರನ್ನಾಗಿ ಕುಮಾರ್ ಹಾವಿನ ಜಿಲ್ಲಾ ಕಾರ್ಮಿಕ ಘಟಕದ ಕಾರ್ಯದರ್ಶಿಯನ್ನಾಗಿ ಕುಮಾರ್ ಗೌಡ ನರಗುಂದ್ ಕಾರ್ಮಿಕ ಘಟಕದ ಜಿಲ್ಲಾ ಸಂಚಾಲಕರನ್ನಾಗಿ ದೇವರಾಜ್ ಭಗವತಿ ಗ್ರಾಮೀಣ ಅಧ್ಯಕ್ಷರನ್ನಾಗಿ ಪ್ರಕಾಶ್ ನರಗುಂದ್ ಉಪಾಧ್ಯಕ್ಷರನ್ನಾಗಿ ಬಸು ಪಡತಪ್ಪನವರ ಇವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ರುದ್ರೇಶ್ ಹುಣಸಿಗಿಡದ ಮಾತನಾಡಿ ನಾಡು ನುಡಿಯ ಜಲ ಭಾಷೆ ವಿಚಾರವಾಗಿ ಎಲ್ಲರೂ ಗಟ್ಟಿ ಧ್ವನಿಯಾಗಿ ಎಲ್ಲರೂ ಮುನ್ನಡಿಯೋಣ ತಾಯಿ ಭುವನೇಶ್ವರಿ ಸೇವೆ ಮಾಡಲು ಸದಾ ಸಿದ್ದರಾಗಿ ಕನ್ನಡದ ಕಂಕಣವನ್ನು ಕಟ್ಟೋಣ ಅಂತ ಹೇಳಿ ಎರಡು ಮಾತುಗಳನ್ನಾಡಿದರು ರಾಜ್ಯ ಉಪಾಧ್ಯಕ್ಷರಾದ ರಾಘವೇಂದ್ರ ರಾಠೋಡ್ ಜಿಲ್ಲಾ ಉಪಾಧ್ಯಕ್ಷ ನೀಲನಗೌಡ ಗೌಡರ ಯುವ ಮುಖಂಡರಾದ ಹುಲುಗಪ್ಪ ಬೋವಿ ಗಣೇಶ್ ಬಡಿಗೇರ್ ರಾಹುಲ್ ಲಮಾಣಿ ತುಳಸಪ್ಪ ಪಾತ್ರೋಟಿ ಇನ್ನು ಅನೇಕ ಕರ್ನಾಟಕ ಸ್ವಾಭಿಮಾನಿ ಪಡೆಯ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದರು.
ವರದಿ: ದಾವಲ್ ಶೇಡಂ