ಸಿಂಧನೂರು : ಜುಲೈ 21 ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾಡ ಸೇನಾನಿ ಟಿ ಏ, ನಾರಾಯಣಗೌಡರ ಆದೇಶದಂತೆ ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್ ಅವರ ಅಧ್ಯಕ್ಷತೆಯಲ್ಲಿ ರಾಯಚೂರು ಮತ್ತು ಸಿಂಧನೂರು ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ನೂತನ ಕಾರ್ಯಕರ್ತರ ಸೇರ್ಪಡೆ ಸಮಾರಂಭ ಸೋಮವಾರ ಮಧ್ಯಾಹ್ನ ನಗರದ ಪ್ರವಾಸಿ ಮಂದಿರದಲ್ಲಿ ಜರಗಿತು ಎಂದು ತಾಲೂಕ ಘಟಕದ ಅಧ್ಯಕ್ಷ ಲಕ್ಷ್ಮಣ ಭೋವಿ ತಿಳಿಸಿ
ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷರಾಗಿ ಗುರುರಾಜ ಮುಕ್ಕುಂದ, ತಾಲೂಕ ಕಾರ್ಮಿಕ ಘಟಕ ಅಧ್ಯಕ್ಷರಾಗಿ ದುರುಗೇಶ್ ಬಾಲಿ, ನಗರ ಕಾರ್ಮಿಕ ಘಟಕ ಅಧ್ಯಕ್ಷರಾಗಿ ವಿಜಯಕುಮಾರ್ ಸುಖಲಪೇಟೆ, ತಾಲೂಕ ಜಾಲತಾಣದ ಸಂಚಾಲಕ ಬಸವರಾಜ ಸುಕಲಪೇಟೆ ಹೋಬಳಿ ಘಟಕ ಅಧ್ಯಕ್ಷರನ್ನಾಗಿ ನಾಗರಾಜ ಸಾಲ್ಗುಂದ, ಹೋಬಳಿ ಘಟಕ ಅಧ್ಯಕ್ಷರನ್ನಾಗಿ ಬಸವರಾಜ್ ವಲ್ಕಂದಿನ್ನಿ
ಇವರನ್ನು ಆಯ್ಕೆ ಮಾಡಲಾಯಿತು ಎಂದು ಕರವೇ ತಾಲೂಕ ಘಟಕ ಅಧ್ಯಕ್ಷ ಲಕ್ಷ್ಮಣ ಭೋವಿ ಯವರು ಪತ್ರಿಕೆಯ ಹೇಳಿಕೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದೇವೇಂದ್ರ ಗೌಡ ಗುಂಜಳ್ಳಿ, ರಾಮಕೃಷ್ಣ ಭಜಂತ್ರಿ,ಬಸವರಾಜ ಗಸ್ತಿ, ಖಜೂರ್ ಭಾಷಾ, ಶಿವಮ್ಮ ಕಬ್ಬೆರ್, ಯಮನಮ್ಮ, ಶಂಕ್ರಪ್ಪ ಬ್ಯಾಡಗಿ, ರವಿ ಸೋಮಲಾಪುರ ಇನ್ನು ಅನೇಕರಿದ್ದರು.
ವರದಿ :ಬಸವರಾಜ ಬುಕ್ಕನಹಟ್ಟಿ




