ಪ್ರತ್ಯೇಕ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ಏಳನೇಯ ದಿನವನ್ನು ಪೂರ್ಣಗೊಳಿಸಿದೆ.
ಚಿಕ್ಕೋಡಿ: ಜಿಲ್ಲಾ ಹೋರಾಟಕ್ಕೆ ನಿಪ್ಪಾಣಿಯ ಸಮಾಧಿ ಮಠದ ಪೀಠಾಧ್ಯಕ್ಷರಾದ, ಪ್ರಾಣಲಿಂಗ ಸ್ವಾಮೀಜಿ ಹಾಗೂ ಖಡಕಲಾಟ ಶ್ರೀ ಮಠದ ಶ್ರೀಗಳಾದ ಶಿವಬಸವ ಸ್ವಾಮೀಜಿಗಳು ಹಾಗೂ ಭಕ್ತರ ದಂಡದಿಂದ ಬೆಂಬಲ..
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಿಪ್ಪಾಣಿಯ ಸಮಾಧಿ ಮಠದ ಪೀಠಾಧ್ಯಕ್ಷರಾದ ಪ್ರಾಣಲಿಂಗ ಸ್ವಾಮೀಜಿ ಮತ್ತು ಖಡಕಲಾಟ ಶ್ರೀಮಠದ ಶಿವಬಸವ ಸ್ವಾಮೀಜಿಗಳು ಹಾಗೂ ಭಕ್ತ ಸಮೂಹಗಳು ಬೆಂಬಲ ಸೂಚಿಸಿ ಚಿಕ್ಕೋಡಿ ಜಿಲ್ಲೆಯಾಗಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಗೆ ಖಡಕಲಾಟ ಗ್ರಾಮದ ರೈತರು ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಾಣಲಿಂಗ ಸ್ವಾಮೀಜಿಯವರು ಮಾತನಾಡಿ ಹೋರಾಟಗಾರರು, ಚಿಕ್ಕೋಡಿ ಜಿಲ್ಲೆಗಾಗಿ ಮೂರು ದಶಕಗಳಿಂದ ಹೋರಾಟವನ್ನು ಮಾಡಿಕೊಂಡು ಬಂದಿದ್ದು ಆ ಹೋರಾಟ ಮುಂದುವರಿದಿದೆ. ಚಿಕ್ಕೋಡಿಯಲ್ಲಿ ಬಹುತೇಕ ಎಲ್ಲ ಕಛೇರಿಗಳು ಬಂದಿವೆ. ಇನ್ನೂ ಕೆಲ ಕಛೇರಿಗಳು ಬಂದರೆ ಜಿಲ್ಲಾ ಸ್ಥಾನಮಾನ ಹೊಂದುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಹೇಳಿದರು, ಶಿವಬಸವ ಸ್ವಾಮೀಜಿ ಅವರು ಮಾತನಾಡಿ ಚಿಕ್ಕೋಡಿಯು ಅರ್ಧ ಬೆಳಗಾವಿ ಜಿಲ್ಲೆಗೆ ಕೇಂದ್ರ ಸ್ಥಾನವಾಗಿದೆ, ಚಿಕ್ಕೋಡಿ ಜಿಲ್ಲೆಯಾದರೆ ಈ ಭಾಗದ ಜನರಿಗೆ ಸರ್ವ ಪ್ರಕಾರದ ಅನುಕೂಲತೆಗಳು ಹೆಚ್ಚುತ್ತವೆ ಕೂಡಲೇ ಚಿಕ್ಕೋಡಿ ಜಿಲ್ಲೆಯಾಗಲಿ, ಈ ಜಿಲ್ಲಾ ಹೋರಾಟಕ್ಕೆ ಸದಾ ಕಾಲ ನಮ್ಮ ಬೆಂಬಲವಿದೆ ಎಂದು ಹೇಳಿದರು.
ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಸರಕಾರವು ಅಧಿವೇಶನದಲ್ಲಿ ವಿನಂತಿಯಿಂದ ಜಿಲ್ಲೆಯನ್ನು ಬೇಡಿದರೆ ಕೊಡುವುದಿಲ್ಲ, ನಮ್ಮ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರು ಆನಂದಸಿಂಘರಂತೆ ಸದನದ ಒಳಗಡೆ ಜಿಲ್ಲೆಗಾಗಿ ಹಟ ಹಿಡಿದು ಸದನದ ಬಾವಿಗೆ ಇಳಿದು ಜಿಲ್ಲೆಯ ಘೋಷಣೆಗಾಗಿ ಹೋರಾಟ ಮಾಡಬೇಕು ಎಂದು ನಿನ್ನೆ ಹೇಳಿದ ಹೇಳಿಕೆಯಿಂದ ಯಾರಿಗಾದರು ಮನಸ್ಸಿಗೆ ನೋವು ಉಂಟಾದಲ್ಲಿ ಕ್ಷಮೆ ಇರಲಿ, ನಮಗೆ ಯಾರೊಬ್ಬರ ಮೇಲೆ ದ್ವೇಶ ಇಲ್ಲ, ಶಾಸಕರ ಮೇಲೆ ಅಪಾರವಾದ ಅಭಿಮಾನ ಇರುವುದರಿಂದ ಅವರಿಗೆ ಸಲಹೆ ಸೂಚನೆಗಳನ್ನು ನೀಡುವ ಹಕ್ಕು ನಮಗಿದೆ ಎಂದು ವಿಶಾದ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಸಾಹಿತಿಗಳಾದ ಡಾ. ಸುಬ್ಬರಾವ್ ಎಂಟೆತ್ತಿನವರ, ಅಪ್ಪಾಸಾಹೇಬ ಹಿರೆಕೋಡಿ, ಸಂಜು ಬಡಿಗೇರ, ಸಚಿನ ದೊಡ್ಡಮನಿ, ಭೀಮರಾವ್ ಮಡ್ಡೆ, ದುರದುಂಡಿ ಬಡಿಗೇರ, ಅಜೀತ ವಗ್ಗೆ, ಶಿವಲಿಂಗ ವಗ್ಗೆ, ಹಾಲಪ್ಪಾ ದುಗಾನೆ, ಗೌತಮ ಹುಕ್ಕೇರಿ, ಮಿಥುನ ಅಂಕಲಿ, ಶಂಕರ ಅವಡಖಾನ, ಮಹಾದೇವ ಬರಗಾಲೆ, ಚಂದ್ರಶೇಖರ ಅರಭಾವಿ, ಸಂತೋಷ ಪೂಜೇರಿ, ಪ್ರತಾಪ ಪಾಟೀಲ, ರಮೇಶ ಡಂಗೇರ, ಮಂಜು ಮಾಳಿ, ಮಾಳು ಕರೆಣ್ಣವರ, ಚಿದಾನಂದ ಶಿರೋಳೆ, ಸುರೇಶ ಕದ್ದಿ, ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು..




