Ad imageAd image

ಸೆರಗ ಸರ್ಸೆ ಅಶ್ಲೀಲತೆ ಹಾಡು : ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ

Bharath Vaibhav
ಸೆರಗ ಸರ್ಸೆ ಅಶ್ಲೀಲತೆ ಹಾಡು : ಹಾಡು ನಿಷೇಧಿಸಿದ ಕೇಂದ್ರ ಸರ್ಕಾರ
WhatsApp Group Join Now
Telegram Group Join Now

ಬೆಂಗಳೂರು: ಸ್ಯಾಂಡಲ್‌ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ, ನಿರ್ದೇಶಕ ಪ್ರೇಮ್ ಸಾರಥ್ಯದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ ಚಿತ್ರಕ್ಕೆ ಈಗ ದೊಡ್ಡ ವಿಘ್ನ ಎದುರಾಗಿದೆ.

ಚಿತ್ರದ ಮೊದಲ ಹಾಡು ‘ಸರ್ಕೆ ಚುನಾರ್’ (ಕನ್ನಡದಲ್ಲಿ ಸರ್ಸೆ ಸೆರಗ ಸರ್ಸೆ) ಅತಿಯಾದ ಅಶ್ಲೀಲತೆ ಹಾಗೂ ದ್ವಂದ್ವಾರ್ಥದ ಸಾಹಿತ್ಯದಿಂದ ಕೂಡಿದೆ ಎಂಬ ಆಕ್ರೋಶಕ್ಕೆ ಮಣಿದಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು, ಸಭ್ಯತೆಯ ಮಾನದಂಡಗಳನ್ನು ಉಲ್ಲಂಘಿಸಿದರೆ ಈ ಹಾಡನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಕೂಡಲೇ ತೆಗೆದುಹಾಕುವಂತೆ ಸೆನ್ಸಾರ್ ಮಂಡಳಿಗೆ (CBFC) ಕಟ್ಟುನಿಟ್ಟಿನ ಆದೇಶ ನೀಡಿದೆ.

ನೋರಾ ಫತೇಹಿ ಅವರ ಮಾದಕ ನೃತ್ಯ ಹಾಗೂ ಸಂಜಯ್ ದತ್ ಕಾಣಿಸಿಕೊಂಡಿರುವ ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿತ್ತು.

ಅಶ್ಲೀಲತೆಯ ಆರೋಪ: ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆಯು ಸಭ್ಯತೆಯ ಗೆರೆ ದಾಟಿದೆ ಎಂದು ಸಾರ್ವಜನಿಕರು ದೂರಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಮಂಗ್ಲಿ ಧ್ವನಿಯ ಈ ಹಾಡು ವೈರಲ್ ಆಗುತ್ತಿದ್ದಂತೆ, ಇದು ಕುಟುಂಬ ಸಮೇತ ನೋಡಲು ಯೋಗ್ಯವಾಗಿಲ್ಲ ಎಂಬ ದೂರುಗಳ ಸುರಿಮಳೆಯೇ ಹರಿದುಬಂದಿತ್ತು.

ಕೇಂದ್ರ ಸರ್ಕಾರದ ಹಸ್ತಕ್ಷೇಪ

ಸಾಮಾನ್ಯವಾಗಿ ಸಿನಿಮಾ ವಿಚಾರಗಳಲ್ಲಿ ಕೇಂದ್ರ ಸಚಿವಾಲಯ ನೇರವಾಗಿ ತಲೆಹಾಕುವುದು ಕಡಿಮೆ. ಆದರೆ, ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ (AICWA) ನೀಡಿದ ದೂರು ಮತ್ತು ರಾಷ್ಟ್ರಮಟ್ಟದಲ್ಲಿ ವ್ಯಕ್ತವಾದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

“ಸಾರ್ವಜನಿಕ ನೈತಿಕತೆ ಮತ್ತು ಸಭ್ಯತೆಯ ಮಾನದಂಡಗಳನ್ನು ಉಲ್ಲಂಘಿಸುವ ಯಾವುದೇ ಅಂಶಗಳನ್ನು ಸಹಿಸುವುದಿಲ್ಲ. ಸಭ್ಯತೆಯ ಮಾನದಂಡಗಳನ್ನು ಉಲ್ಲಂಘಿಸಿದರೆ ಕೂಡಲೇ ಯೂಟ್ಯೂಬ್ ಸೇರಿದಂತೆ ಎಲ್ಲಾ ಡಿಜಿಟಲ್ ಮಾಧ್ಯಮಗಳಿಂದ ಈ ಹಾಡನ್ನು ಸ್ಕ್ರಬ್ (Scrub) ಮಾಡಬೇಕು,” ಎಂದು ಸಚಿವಾಲಯವು ನಿರ್ದೇಶನ ನೀಡಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!